ಹಣ-ಹೆಂಡ ಭರಾಟೆಯಿಲ್ಲದ ಸುಸೂತ್ರ ಚುನಾವಣೆ ಬರಬಹುದೇ?
ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಹಣ-ಹೆಂಡ ಭರಾಟೆಯಿಲ್ಲದ ಸುಸೂತ್ರ ಚುನಾವಣೆ ಬರಬಹುದೇ?
ಈ ಬಾರಿಯ ಚುನಾವಣೆ ನೋಡಿದರೆ ಅಂತಹ ನಿರೀಕ್ಷೆ ಇಟ್ಟುಕೊಳ್ಳಬಹುದು ಅನ್ನಿಸುತ್ತದೆ.
ಫ್ಯಾಷನ್ ಡಿಸೈನರ್ ಮಧು, 9945737427
ಯಶಸ್ವಿ ಪುರುಷನ ಹಿಂದೆ ಹೆಣ್ಣು ಇರುತ್ತಾಳೆ ಎಂಬ ಮಾತು ಮನಮೋಹನ ಸಿಂಗ್ ವಿಷಯದಲ್ಲಿ ಸುಳ್ಳಾಯ್ತಲ್ಲಾ?
ಹಿಂದೆ ಸೋನಿಯಾ ಇಲ್ಲದಿದ್ರೆ ಅವರು ಪ್ರಧಾನಿಯಾಗುತ್ತಲೇ ಇರಲಿಲ್ಲ!
ಆರ್.ಸಿ. ಪರಶುರಾಮ, 9902203492
ಬಣ್ಣ ಬದಲಿಸೋ ಊಸರವಳ್ಳಿಗೂ ಮಾತು ಬದಲಿಸೋ ರಾಜಕಾರಣಿಗಳಿಗೂ ಏನು ವ್ಯತ್ಯಾಸ?
ಊಸರವಳ್ಳಿಯದ್ದು ನೈಸರ್ಗಿಕ, ರಾಜಕಾರಣಿಗಳದ್ದು ರೂಢಿ.
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಪ್ರದರ್ಶನಕ್ಕೆಂದೇ ಧರಿಸಿಕೊಂಡ ಆಭರಣಗಳನ್ನು ಬಟ್ಟೆಯಿಂದ ಮುಚ್ಚಿಕೊಳ್ಳುತ್ತಾರಲ್ಲಾ?
ಮುಚ್ಚಿಟ್ಟಿದ್ದರ ಬಗ್ಗೆಯೇ ಜನರಿಗೆ ಹೆಚ್ಚು ಆಸಕ್ತಿ ಎಂಬ ಕಾರಣಕ್ಕೆ!
ವಿ. ಹೇಮಂತಕುಮಾರ, 9901739104
ಕೆಲವು ಹೆಂಗಸರು ನೆಂಟರು ಮನೆಗೆ ಬಂದಾಗಲೇ ಮಕ್ಕಳನ್ನು ಹೊಡೆದು ಅಳಿಸುತ್ತಾರಲ್ಲ ಯಾಕೆ?
ನೆಂಟರಿಗೆ ಹೊಡೆಯಲು ಆಗುವುದಿಲ್ಲವಲ್ಲ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

