ಸಂಪಾದಕೀಯ

ರಮ್ಯಾಳನ್ನು ಪ್ರೀತಿಯಿಂದ ರಮ್ಮು ಅಂತ ಕರೆದರೆ ಕೋಪ..

Published On :

ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಮೋದಿ ಪ್ರಧಾನಿಯಾದರೆ ದೇಶ ತೊರೆಯುತ್ತೇನೆಂದು ನೊಂದುಕೊಂಡವರನ್ನು ರಾಯಭಾರಿಯಾಗಿ ಕಳುಹಿಸಿದರೆ ಹೇಗೆ?
ಜೀವನ ಪರ್ಯಂತ ಆಭಾರಿಯಾಗಿರುತ್ತಾರೆ!

ಸರಸ್ವತಿ ರಮೇಶ್, ಹನುಮನಾಳು
ಇಂದಿನ ಸಿನಿಮಾಗಳಲ್ಲಿ ಮಳೆಯ ಹಾಡುಗಳು ಇಲ್ಲ. ಆದರೆ ಮಳೆಯ ದೃಶ್ಯಗಳು ಇದ್ದೇ ಇರುವುದರ ಗುಟ್ಟೇನು?
ಮುಂಗಾರು ಮಳೆ ಎಫೆಕ್ಟ್!

ಜಯಶ್ರೀ ಅಬ್ಬಿಗೇರಿ, ರಾಮದುರ್ಗ, 9449234142
ಪ್ರತಿ ವರ್ಷ ಪರೀಕ್ಷೆಯಲ್ಲಿ ಬಾಲಕಿಯರದೇ ಮೇಲುಗೈ. ಹೀಗಾದರೆ ಮುಂದೆ ಬಾಲಕರ ಪರಿಸ್ಥಿತಿ?
ಬಾಲಕರು ಸದಾ ಹುಡುಗಿಯರ ಹಿಂದೆ!

ಐಗೂರು ರವಿಪ್ರಿಯ, ಸೋಮವಾರಪೇಟೆ, 9483111096
ಈ ಸಾರಿ ಲೋಕಸಭೆ ಚುನಾವಣೆಯಲ್ಲಿ ರಮ್ಯ ಅವರ 'ಮತದ ದೋಸೆ' ಹೆಚ್ಚು ಹುಳಿಯಾಗಲು ಕಾರಣವೇನು?
ಬೇರೆಯವರು ಹುಳಿ ಹಿಂಡಿದ್ದಾರೆ ಎಂಬುದು ರಮ್ಯ ಆರೋಪ.

ಫ್ಯಾಷನ್ ಡಿಸೈನರ್ ಮಧು, 9945737427
ಪ್ರೇಯಸಿ ರಮ್ಯಾಳನ್ನು ಪ್ರೀತಿಯಿಂದ ರಮ್ಮು ಅಂತ ಕರೆದರೆ ಕೋಪ ಮಾಡಿಕೊಳ್ತಾಳಲ್ಲ?
ಹೆಸರಿಗೇ ನೀನು ಟೈಟಾದ್ರೆ ಅಂತ ಭಯ!

 ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.