ಜಡೆ
= ಆಗಾಗ ಜಡಕು ಬೀಳುವಂಥದ್ದು ಮತ್ತು ಜಡಕು ಉಂಟು ಮಾಡುವಂಥದ್ದು
= ಕಟ್ಟಿದರೆ ವೇಣಿ ಸಂಹಾರ, ಕೆಟ್ಟರೆ ಸಂಹಾರ ವೇಣಿ
= ಇದು ಕೆಲವೊಮ್ಮೆ ಹಾವಿನಂತೆ, ಕೆಣಕಿದರೂ ಹಾವಿನಂತೆಯೇ
= ಹಿಂದಿನ ಕಾಲದ ಸ್ತ್ರೀಯರು ಇದನ್ನು ಹೊಂದಿರುತ್ತಿದ್ದರು. ಇದನ್ನು ಈಗ ಚಿತ್ರಗಳಲ್ಲಿ ಕಾಣಬಹುದು
= ಜಡೆಯ ಜಾಡು ಹಿಡಿಯುವುದು ಕಷ್ಟ ಕಷ್ಟ
= ಕೆಲವು ಜಡೆಗಳು ಕುದುರೆ ಬಾಲ, ಇನ್ನು ಕೆಲವು ಕತ್ತೆ ಬಾಲ. ಮತ್ತೊಂದಿಷ್ಟು ಇಲಿ ಬಾಲ
= ಯುವಕರ ಜಡತ್ವವನ್ನು ಹೋಗಲಾಡಿಸಿ ಬಡಿದೆಬ್ಬಿಸುವ ಮಾಯೆ
= ಎರಡು ಜಡೆ ಸೇರಿದರೆ ಸುದ್ದಿ, ಮೂರು ಸೇರಿದರೆ ಸುದ್ದಿ ಮತ್ತು ಸುದ್ದಿ, ನಾಲ್ಕು ಸೇರಿದರೆ ಸುದ್ದಿ, ಸುದ್ದಿ ಮತ್ತು ಸುದ್ದಿ
= ಹೃದಯ ಹೃದಯಗಳನ್ನು ಜೋಡಿಸಿ ಕಸಿ ಮಾಡುವುದರಿಂದ ಇದಕ್ಕೆ ಜಡೆ ಎಂದು ಹೆಸರು
ಅಳಿವಿನಂಚಿನಲ್ಲಿರುವ ಪ್ರಭೇದ
= ಮಸೂರ ಹಿಡಿದು ನೋಡಿದರೆ ಜಡೆಯ ಪಳೆಯುಳಿಕೆ ಕಾಣಬಹುದು
= ಎರಡು ಜಡೆ ಸೇರಿದರೆ ಜಗಳ ಎನ್ನುತ್ತಾರೆ. ಅದು ಸುಳ್ಳು. ಎರಡು ಸೇರಲೇಬೇಕೆಂದೇನೂ ಇಲ್ಲ
= ಸುಂದರಿಯೆಂಬ ದರಿಯೊಳಗೆ ದೂಡುವಂಥದ್ದು
= ಸಂಸಾರದ ಜಂಜಡಗಳನ್ನು ಒಂದು ಕ್ಷಣ ಇಲ್ಲವಾಗಿಸುವಂಥದ್ದು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

