ಸಂಪಾದಕೀಯ

ಮಜಾ

Published On :

ಮಜಾ
    ಕದ್ದು ಬೀಡಿ ಸೇದುವುದರಲ್ಲಿ ಇರುವಂಥದ್ದು
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಹೆಸರಿನಲ್ಲಿ ಪ್ರಭುಗಳು ನಡೆಸೋದು
    ಮೂಜಗದ ಜನರೆಲ್ಲರ ಪರಮ ಪುರುಷಾರ್ಥ
    ಕುಡಿದು ಕುಪ್ಪಳಿಸಿ ಮಾಡುವ ಮೋಜು ಮಸ್ತಿ ಅನರ್ಥಗಳ ಅನರ್ಥಾಂತರ (ಸಮಾನಾರ್ಥಕ)
    ಮೇಜಿನ ಕೆಳಗೆ ಕೈಯ್ಯೊಡ್ಡುವ ಅಧಿಕಾರಿಗಳು ನಡೆಸುವ ಮೇಜವಾನಿ
    ಆಜೂ ಬಾಜೂ ಚೆಂದದ ಹುಡುಗಿಯರಿದ್ದರೆ ಕಚೇರಿಯಲ್ಲಿ ಕೆಲಸಕ್ಕಿಂತ ಹೆಚ್ಚು ಮಾಡಲ್ಪಡುವಂಥದ್ದು
    ಸಂತಾಪ, ಪರಿತಾಪಗಳನ್ನೆಲ್ಲ ವಜಾ ಮಾಡಿ ಖುಷಿಯ ಹಾಜರಿಗೆ ಕಾರಣವಾಗುವಂಥದ್ದು
    ಅವಿವಾಹಿತನಿಗೆ ನಾಗರಿಕ ಸಂವಿಧಾನ ಕೊಟ್ಟಿರುವ ಸ್ವಾತಂತ್ರ್ಯಗಳಲ್ಲಿ ಒಂದು
    ರಾಜನಾಗಬೇಕೆಂದು ಕನಸು ಕಾಣುವ ಹಲವರ ಉದ್ದೇಶ
    ಕ್ಲಾಸ್‌ಗೆ ಬಂಕ್ ಹಾಕುವುದು, ಕದ್ದು ಮುಚ್ಚಿ ಸಿನಿಮಾಗೆ ಹೋಗುವುದು
    ಕ್ಲಾಸಿನಲ್ಲಿ ರಾಕೇಟ್ ಹಾರಿಸಿ ಮಜಾ ಉಡಾಯಿಸುವ ಉಡಾಳ, ವಿಜ್ಞಾನಿಯಾಗಿ ರಾಕೇಟ್ ಉಡಾಯಿಸುವ ಅವಕಾಶ ತಪ್ಪಿಸಿಕೊಳ್ಳುತ್ತಾನೆ

-ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.