ಟೆನ್ಶನ್
'ಡೆಡ್ ಲೈನ್' ಹುಟ್ಟಿಸುವ ಡೆಡ್ಲೀ ಮನೋಭಾವ
ಪರೀಕ್ಷೆ, ಇಂಟರ್ವ್ಯೂವ್, ಪ್ರಪೋಸ್, ಫಲಿತಾಂಶ ಇತ್ಯಾದಿಗಳ ಮುನ ತಲೆಗೊದಗುವ ಗುನ
ಮನುಷ್ಯ ಟೆನ್ಶನ್ ಇಲ್ಲದೇ ಬದುಕಲಾರ. ಹಾಗಾಗಿಯೇ ಮದುವೆಯಾಗುತ್ತಾನೆ
ಕೆಲವರು ಟೆನ್ಶನ್ನಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ಕೆಲವರಿಗೆ ಹೆಚ್ಚು ಕೆಲಸವೆಂದರೇ ಟೆನ್ಶನ್ ಆಗುತ್ತದೆ
ಟೆನ್ಶನ್ ಶುರುವಾದರೆ ಬಾಯಿ ರುಚಿ ಕೆಡುವುದರಿಂದ ಹೊಟ್ಟೆಯ ಪಾಲಿಗೆ ನಿರಶನ.
ಟೆನ್ಶನ್ ಆದಾಗ ಬುದ್ಧಿ ಸ್ಥಗಿತಗೊಳ್ಳುವುದರಿಂದ ಅದರದ್ದೂ ನಿರಶನವೇ
ಟೆನ್ಶನ್ ಆಗಲು ಟೆನ್ ಸನ್ಸ್ ಇರಬೇಕೆಂದಿಲ್ಲ
ವಿವಾಹಿತನಿಗೆ ವಿವಾಹವಾಗಿಲ್ಲ ಎಂದು ಟೆನ್ಶನ್, ವಿವಾಹಿತನಿಗೆ ಅದು ಆಗಿದ್ದಕ್ಕೇ ಟೆನ್ಶನ್
ಸಿಟ್ಟಿನ ತಾಯಿ ಬೇರು, ದುಡುಕಿನ ತಂತುಬೇರು
ಟೀನೇಜಲ್ಲಿ ಇದು ಜಾಸ್ತಿ, ಓಲ್ಡ್ ಏಜ್ನಲ್ಲಿ ಪ್ರಯೋಜನಂ ನಾಸ್ತಿ
ಜಂಡು ಬಾಮ್, ಅಮೃತಾಂಜನ ಮೊದಲಾದ ತಲೆನೋವು ಮುಲಾಮುಗಳ ರಾಯಭಾರಿ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

