ಪರೀಕ್ಷಾ ಭವನ ಚುರುಕಾಗಲಿ
ನಮ್ಮ ಬೆಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾ ವಿಭಾಗ ಸಂಪೂರ್ಣ ನಿದ್ರೆಗೆ ಜಾರಿದೆ. ಇಲ್ಲಿ ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳು ರಾಜ್ಯದ ನಾನಾ ಭಾಗಗಳಿಂದ ಬರುವುದು ಸಾಮಾನ್ಯವಾಗಿದೆ. ದೋಷಪೂರಿತ ಅಂಕಪಟ್ಟಿ, ಪದವಿ ಪತ್ರಗಳನ್ನು ಸರಿಪಡಿಸಿಕೊಡಿ ಎಂದು ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ ಅಲೆದಾಡುವುದು ಸಾಮಾನ್ಯ ಸಂಗತಿಯಾಗಿದೆ. ಆರು ತಿಂಗಳು, ವರ್ಷ ಕಳೆದರೂ ಫಲಿತಾಂಶ ಶೂನ್ಯ. ಇಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಅವರಿಂದ ಬರುವ ಉತ್ತರ "ಕಳುಸಿದ್ದೇವೆ ಸ್ವಾಮಿ ಬರುತ್ತೆ" ಎಂದು. ಯಾವಾಗ ಬರುತ್ತೆ ಎಂದು ಪ್ರಶ್ನಿಸಿದರೆ, "ಗೊತ್ತಿಲ್ಲ" ಎನ್ನುತ್ತಾರೆ. ದಯವಿಟ್ಟು ಸಂಬಂಧಪಟ್ಟ ಮುಖ್ಯಸ್ಥರು ಈ ವಿಭಾಗವನ್ನು ಚುರುಕುಗೊಳಿಸಿ ಉಪಕರಿಸಬೇಕೆಂದು ಪ್ರಾರ್ಥನೆ.
-ರಾಘವೇಂದ್ರ ಹೆಚ್.ಎಸ್., ಜಯನಗರ, ಬೆಂಗಳೂರು.
ಮಾತು ಬೇಡ, ಕೆಲಸವಾಗಲಿ
ಮನಮೋಹನರಂತೆಯೇ ಎಡವುತ್ತಿದ್ದಾರೆಯೇ ಸಿದ್ದರಾಮಯ್ಯ? (ಜೂ. 26, ಕ.ಪ್ರ.) ಎಂಬ ಶೀರ್ಷಿಕೆಯಲ್ಲಿ ಶಿವರಾಮಗೌಡರು ಮುಖ್ಯಮಂತ್ರಿಯವರ ಆಡಳಿತ ವೈಖರಿಯನ್ನು ತೆರೆದಿಟ್ಟಿದ್ದಾರೆ. ಅವರ ಒಂದು ವರ್ಷದ ಸಾಧನೆ ಜಾಹೀರಾತುಗಳಿಗಷ್ಟೇ ಸೀಮಿತವಾಗಿದೆಯೆಂದು ತೋರುತ್ತದೆ. ಒಂದು ವಿಧದಲ್ಲಿ ಅವರ ಆಡಳಿತ ಋ್ಠಜಜ ಝಿಜಜಟ್ಝಟ್ಜಿ ಎನ್ನುತ್ತಾರಲ್ಲಾ ಹಾಗೆ. ಒಳ್ಳೆಯ ನಾಯಕತ್ವ ಎಂದರೆ ಬದಲಾವಣೆ ಕಾಣಿಸಬೇಕು. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಮುಂತಾದ ಯೋಜನೆಗಳಿಂದ ಎಷ್ಟು ಜನರಿಗೆ ಒಳಿತಾಗಿದೆ? ಅನ್ನಭಾಗ್ಯದ ಅವ್ಯವಸ್ಥೆಯನ್ನು ಈಗಾಗಲೇ ಕಂಡಿದ್ದೇವೆ.
ಜನರಲ್ಲಿ ವಿಶ್ವಾಸವನ್ನುಂಟು ಮಾಡಬೇಕಾದರೆ ವಿದ್ಯಾಭ್ಯಾಸ, ಆರೋಗ್ಯ, ಕುಡಿಯುವ ನೀರು, ವಿದ್ಯುಚ್ಛಕ್ತಿ, ಶೌಚಾಲಯಗಳು ಇತ್ಯಾದಿಗಳಿಗೆ ಗಮನ ಹರಿಸಬೇಕು. ಹಿಂದೊಮ್ಮೆ ಮುಖ್ಯಮಂತ್ರಿಗಳು ಹೇಳಿದ್ದರು: 'ನಾನೂ ಮುಖ್ಯಮಂತ್ರಿ, ಮೋದೀನೂ ಮುಖ್ಯಮಂತ್ರಿ. ಹೆಚ್ಚುಗಾರಿಕೆ ಏನು?' ಮೋದಿಯವರ ಹೆಚ್ಚುಗಾರಿಕೆ ಮಾತಿನಲ್ಲಿಲ್ಲ. ಅವರ ಕಾರ್ಯವೈಖರಿಯಲ್ಲಿದೆ.
-ಕೆ.ಆರ್. ಸ್ವಾಮಿ. ಬೆಂಗಳೂರು
ಸ್ನಾತಕೋತ್ತರ ಪದವಿ ಪರೀಕ್ಷೆ ಯಾವಾಗ?
ಗುಲಬರ್ಗ ವಿಶ್ವವಿದ್ಯಾಲಯವು ಯಾವಾಗಲೂ ತನ್ನದೇ ಆದ ಕಾನೂನನ್ನೇ ಸೃಷ್ಟಿಸಿಕೊಳ್ಳುತ್ತಾ ಬಂದಿದೆ. ಈಗ ರಾಜ್ಯದ ಎಲ್ಲ ವಿವಿಗಳಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಮುಗಿದು ಮರಳಿ ಮೌಲ್ಯಮಾಪನ ಆಗುವ ಹಂತದಲ್ಲಿ ಇದ್ದರೆ ಗುಲಬರ್ಗ ವಿವಿಯಲ್ಲಿ ಪರೀಕ್ಷೆಗಳೇ ನಡೆದಿಲ್ಲ.
ಈ ವಿ.ವಿ. ಸ್ಥಾಪನೆಯಾಗಿ 33 ವರ್ಷಗಳಾಗಿವೆ. ಇದುವರೆಗೂ ಒಂದು ಬಾರಿಯೂ ವಿವಿ ಪ್ರಕಟಿಸಿದ ದಿನಾಂಕದಲ್ಲಿ ಪರೀಕ್ಷೆಗಳು ನಡೆದಿಲ್ಲ! ಎಲ್ಲ ವಿವಿಗಳಲ್ಲಿ ಪ್ರವೇಶ ತೆಗೆದುಕೊಳ್ಳುವಾಗ ಪ್ರಾಸ್ಫೆಕ್ಟಸ್ನಲ್ಲಿಯೇ ಯಾವ ಯಾವ ದಿನಾಂಕದಲ್ಲಿ ಆಂತರಿಕ ಪರೀಕ್ಷೆಗಳು ಮತ್ತು ವಾರ್ಷಿಕ ಪರೀಕ್ಷೆಗಳು ನಡೆಯಬೇಕು ಎಂಬ ಟೈಮ್ಟೇಬಲ್ ಇರುತ್ತದೆ. ಆದರೆ ಗುಲಬರ್ಗ ವಿವಿಯಲ್ಲಿ ಈ ಯಾವ ನೀತಿ ನಿಯಮಗಳನ್ನೂ ಪಾಲಿಸಲಾಗುತ್ತಿಲ್ಲ. ಎಲ್ಲ ವಿವಿಗಳಲ್ಲಿ ಏಕ ಮಾದರಿ ಪರೀಕ್ಷೆಗಳು ನಡೆಯಬೇಕೆಂದು ರಾಜ್ಯ ಸರ್ಕಾರ ಆದೇಶ ಮಾಡಿದರೂ ಕೂಡ ಗುಲಬರ್ಗ ವಿವಿಯು ಸರ್ಕಾರದ ಆದೇಶವನ್ನು ಗಾಳಿಗೆ ತೂರಿದೆ. ಈ ರೀತಿಯಾಗಿ ಅವ್ಯವಸ್ಥೆಗೆ ಕುಲಸಚಿವರ ಅಥವಾ ಕುಲಪತಿಗಳ ನಿರ್ಲಕ್ಷ್ಯ ಕಾರಣವೇ? ವಿವಿ ಈಗಲಾದರೂ ಸ್ನಾತಕೋತ್ತರ ಪದವಿ ಪರೀಕ್ಷೆ ಮುಗಿಸುವುದೇ?
-ರಾಜಕುಮಾರ ಎಂ ದಣ್ಣೂರ, ಗುಂಡಪ್ಪಾ ಸಿಂಗೆ, ಹಣಮಂತರಾಯ ಕರಡ್ಡಿ, ವಿದ್ಯಾರ್ಥಿ ಒಕ್ಕೂಟ, ಗುಲಬರ್ಗ ವಿ.ವಿ.
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

