ಪುರುಸೊತ್ತು
ಇದು ಯಾರಪ್ಪನ ಸ್ವತ್ತೂ ಅಲ್ಲ. ನಾವೇ ಮಾಡಿಕೊಳ್ಳಬೇಕಾದ ಸ್ವಯಾರ್ಜಿತ
ರಾಜನಂತೆ ಸಮಯ ಕಳೆಯಲೆಂದು ಸಿಗುವ ರಜಾ
ಕಾರ್ಯದ ಬಂಧನದಿಂದ ಸಿಗುವ ಅಲ್ಪ ಬಿಡುವು
ಹೆಚ್ಚಿನ ಸಮಯ ಇದು ಪರರ ಸೊತ್ತಾಗಿಬಿಡುತ್ತದೆ
ಪುರುಪುರು ಕಾರ್ಯಗಳ ನಡುವೆ ಸಿಗುವ ಚೂರು ಆರಾಮು
ತಲೆ ಚಿಟ್ಟು ಹಿಡಿಯುವುದನ್ನು ತಡೆಯುವ ಪ್ರತಿಬಂಧಕ
ತಡವಾಯಿತು..ಬೇಗ ಬೇಗ ಎನ್ನುವ ಒತ್ತಡವಿಲ್ಲದ ಅವಕಾಶ
ದಾಸ ದಾಸಿಯರು ಬಿಂದಾಸ್ ಆಗಿ ಕಳೆಯಬಹುದಾದ ಸಮಯ
ನಿಮ್ಮ ಬಳಿ ಎಷ್ಟೇ ಸೊತ್ತು ಇರಬಹುದು. ಆದರೆ ಅನುಭವಿಸಲು ಪುರುಸೊತ್ತು ಇಲ್ಲವೆಂದರೆ ಅದು ಇದ್ದೂ ಇಲ್ಲದಂತೆ
ಸತ್ತಂತಾದವನ ಮುಖದ ಮೇಲೆ ಚುಮುಕಿಸುವ ತಣ್ಣನೆಯ ಹನಿಗಳು
ಪುರುಸೊತ್ತು ಇದ್ದಾಗ ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು
ಪುರುಸೊತ್ತು ಇಲ್ಲದವರನ್ನು ಜಗತ್ತು ವರ್ಕೋ ಹಾಲಿಕ್ ಎಂದು ತಿರಸ್ಕರಿಸುತ್ತದೆ
ತುಂಬ ಪುರುಸೊತ್ತು ಇರುವವರನ್ನು ಜಗತ್ತು ನಿರುದ್ಯೋಗಿ ಎನ್ನುತ್ತದೆ
ಕೆಲವರಿಗೆ ಕೆಲಸವೂ ಇಲ್ಲ ಪುರುಸೊತ್ತೂ ಇಲ್ಲ ಎಂಬ ಸ್ಥಿತಿಯೇ ಹೆಚ್ಚು
ಪುರುಸೊತ್ತು ಇಲ್ಲದಷ್ಟು ಕೆಲಸವಿದ್ದರೆ ಸಾಲದು, ಅದನ್ನು ಜಗತ್ತಿಗೆ ಅರ್ಥವಾಗುವಂತೆ ನಟಿಸಬೇಕು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

