ಸಂಪಾದಕೀಯ

ಪೊರಕೆ

Published On :

   ಕೂಸು ಕಸ ಮಾಡುತ್ತದೆಂದು ಕೂಸು ಹುಟ್ಟುವ ಮೊದಲೇ ಕಸಬರಿಕೆ ಕೊಂಡರಂತೆ..
    ಮೂಲೆಗೆ ತಳ್ಳಲ್ಪಡುವ ಅಮೂಲ್ಯ ಸಾಧನ
    ನನ್ನ ಹಿಡಿದುಕೊಳ್ಳಿ ಎಂದು ಮೂಲೆಯಿಂದಲೇ ಅಲವತ್ತುಕೊಳ್ಳುವ ಹಿಡಿ
    ಯಜಮಾನನಿಗಿಂತ ಮನೆಯ ಮೂಲೆ ಮೂಲೆಯ ಪರಿಚಯವೂ ಇರುವ ಏಕೈಕ ವಸ್ತು.
    ಹಿಡಿಯನ್ನು ಹಿಡಿದವರನ್ನೆಲ್ಲಾ ಹಿಡಿ ಹಿಡುಕರು ಎನ್ನಬಹುದು
    ಧೂಳನ್ನು ಝಾಡಿಸಿ ನೆಲವನ್ನು ಧವಳಗೊಳಿಸುವುದೇ ಇದರ ಕೂಳು ಮತ್ತು ಗೋಳು
    ಕನ್ನಡಿ ಹಿಡಿವ ಕೈ ಪೊರಕೆಯನ್ನೂ ಹಿಡಿಯಬಲ್ಲುದು
    ಪೊರಕೆ ಸ್ವಚ್ಛಗೊಳಿಸುತ್ತದೆ, ಯಾವಾಗೆಂದರೆ, ಅದನ್ನು ಹಿಡಿದಿರುವ ಕೈ ಬಯಸಬೇಕು ಅಷ್ಟೇ
    ಪೊರಕೆಯನ್ನು ಯಾರೂ ಹರಕೆ ಹೊರಲಾರರು
    ಕ್ಲೀನ್ ಸ್ವೀಪ್ ಮಾಡುವುದೇ ಇದರ ಗುರಿ
    ಬ್ರೂಮ್ ಬ್ರೂಮ್...
    ಪೊರಕೆಯನ್ನೇ ಚಿಹ್ನೆಯಾಗುಳ್ಳವರನ್ನು ಪೊರಕೀಯರು ಎನ್ನಬಹುದು
    ಪೊರಕೆ ಸೇವೆ ಉಚಿತವಾಗಿದ್ದರೂ ಯಾರೂ ಬೇಕು ಎನ್ನರು
    ಹಲವರ ಪೊರೆಯುವುದರಿಂದ ಇದಕ್ಕೆ ಈ ಹೆಸರು


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.