ಪೊರಕೆ
ಗುಡಿಸಲನ್ನು ಗುಡಿಸಲೆಂದು ಬಳಸುವ ವಸ್ತು
ಗುಡಿಸಿ ಸ್ವಚ್ಛವೂ ಮಾಡಬಹುದು. ಗುಡಿಸಿ ಚೊಕ್ಕವೂ ಮಾಡಬಹುದು
ಕೆಲವರ ಕೈಗೆ ಸಿಕ್ಕರೆ ಗುಡಿಸಿ ಗುಂಡಾಂತರವನ್ನೇ ಮಾಡುತ್ತಾರೆ
ಇದಕ್ಕೆ ಕ್ಲೀನ್ ಇಮೇಜ್ ಇದೆ
ಸ್ವಚ್ಛತಾ ಕಾರ್ಯಕರ್ತರ ಲಾಂಛನ
ಆಮ್ ಆದ್ಮಿಯಿಂದ ಹಿಡಿದು ಅಮೀರ್ ಲೋಗ್ವರೆಗೂ ಅತ್ಯಗತ್ಯ ಸಾಧನ
ಹೆಂಡತಿಯ ಕೈಗೆ ಸಿಕ್ಕರೆ ಇದು ಮಾರಕಾಸ್ತ್ರ
ಮನೆಯ ಒಳ ಹೊರಗೆಲ್ಲಾ ತಿರುಗಿ ಮೂಲೆಯಲ್ಲಿ ಕುಕ್ಕುರಿಸುವಂಥದ್ದು
ಕೈ ಹಿಡಿದು ಪೊರೆ ಎನ್ನನು (ಆಮ್ ಆದ್ಮಿ ಹಾಡು)
ಜನರು ಪೊರಕೆ ಹಿಡಿದರು, ಪೊರಕೆ ಕೈ ಸೇರಿತು.
ಪೋಕರಿಗಳನ್ನು ನಿಯಂತ್ರಿಸಲು ಪೋರಿಗಳಿಗೆ ಇದು ಸರಿಯಾದ ಅಸ್ತ್ರವಾಗಬಲ್ಲುದು
ಕಸವನ್ನು ಕಸಾಯಿಖಾನೆಗೆ ತಳ್ಳುವ ಕಸುವುಳ್ಳದ್ದು
ಇದರದ್ದು ನಿತ್ಯವೂ ಜೋರು ಕಸ-ರತ್ತು
ಕಸವೇ ಇದರ ಹೊಟ್ಟೆಪಾಡು
ಕಸಬರಿಕೆಗೂ ಕಾಸಿಗೂ ಇತ್ತೀಚೆಗೆ ಚೆನ್ನಾಗಿ ಆಗಿಬರುತ್ತದಂತೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

