ಸಿಟ್ಟು
ಬಡವನ ಸಿಟ್ಟು ದವಡೆಗೆ ಮೂಲ. ಸಿರಿವಂತನದ್ದು ಬಡವನ ಜೀವಕ್ಕೇ ಮೂಲ
ಸಿಟ್ಟು ಎಲ್ಲವನ್ನೂ ಪ್ರಶ್ನಿಸುತ್ತದೆ ಮತ್ತು ಯಾವುದಕ್ಕೂ ಇದು ಉತ್ತರವಲ್ಲ
ಕಲಹ ಮತ್ತು ಕೋಲಾಹಲದ ಉತ್ಪಾದಕ ಸಾಮಗ್ರಿ
ಸೀಟು ಬಿಟ್ಟುಕೊಡಿ ಎಂದು ಹುಡುಗಿಯನ್ನು ಹೊರತು ಪಡಿಸಿ ಬೇರೆಯವರು ಕೇಳಿದಾಗ ಬರುವಂಥದ್ದು
ಯಡಿಯೂರಪ್ಪನವರ ಸ್ವಂತದ ಆಸ್ತಿ
ರಾಜಕಾರಣಿಗಳಿಗೆ ಸಿಟ್ಟು ಬಂದಿದೆಯೆಂದರೆ ಅವರ ಕುಟುಂಬಕ್ಕೇನೋ ಆಗಿದೆ ಎಂದರ್ಥ
ವಾಜಪೇಯಿಗೆ ಸಿಟ್ಟು ಬಂದಿದೆಯೆಂದರೆ ದೇಶಕ್ಕೆ ಯಾರೋ ಕೆಡುಕೆಸಗಿದ್ದಾರೆಂದರ್ಥ
ಗಂಡನಿಗೆ ಸಿಟ್ಟು ಬಂದಿದೆಯೆಂದರೆ ಬಾಸ್ ಏನೋ ಬೈದಿದ್ದಾನೆಂದರ್ಥ
ಹೆಂಡತಿಗೆ ಸಿಟ್ಟು ಬಂದಿದೆಯೆಂದರೆ ಮಾತ್ರ ಕಾರಣ ಹುಡುಕಬಾರದು.
ಕಾರಣವಿಲ್ಲದೆಯೂ ಬರುವ ಸಾಮರ್ಥ್ಯ ಹೆಂಡತಿಯ ಸಿಟ್ಟಿಗಿದೆ
ಅಪ್ಪನಿಗೆ ಸಿಟ್ಟು ಬಂದಿದೆಯೆಂದರೆ ಅಮ್ಮ ತವರಿಗೆ ಹೋದವಳು ಬಂದಿಲ್ಲವೆಂದರ್ಥ.
ಅಮ್ಮನಿಗೆ ಸಿಟ್ಟು ಬಂದಿದೆಯೆಂದರೆ ತವರಿಗೆ ಹೋದರೂ ಫೋನ್ ಮಾಡಿ ಅಪ್ಪ ತಲೆ ತಿಂದಿದ್ದಾರೆಂದರ್ಥ
ಸಿಟ್ಟಿನಿಂದ ಕೆಲವು ಒಳ್ಳೆಯದೂ ಅಕಸ್ಮಾತ್ತಾಗಿ ಆಗಿಬಿಡುತ್ತವೆ. ರಾಜಕಾರಣಿಗಳಿಂದಲೂ ಕೆಲವು ಒಳ್ಳೆಯ ಕೆಲಸಗಳು ಆಗುವ ಹಾಗೆ
ಕೆಲವರು ಸಿಟ್ಟು ಬಂದಾಗ ಬುಸುಬುಸು ಸಿಗರೇಟು ಸೇದುವ ಮೂಲಕ ಸುಟ್ಟು ಹಾಕುತ್ತಾರೆ.
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

