ಸಂಪಾದಕೀಯ

ಕಾಸು

Published On :

ಕೂಸು ಹುಟ್ಟುವ ಮೊದಲೇ ಕೂಡಿಡಬೇಕಾದದ್ದು
    ಕೇಸು ಬೇಗ ಮುಗಿಯಲು ಖರ್ಚು ಮಾಡಬೇಕಾದದ್ದು
    ಕಾಸಿನ ಸರ ಮಾಡಿಸಲು ಬೇಕಾದ ಬಂಡವಾಳ
    ಕೆಲವರು ದುಸುಮುಸುಗುಡಲು ಕಾಸಿನ ಬಲವೇ ಕಾರಣ
    ಹೂಕೋಸು ಮಾರಿ ಗಳಿಸುವಂಥದ್ದು
    ಜಾಸ್ತಿ ಕಾಸಿದ್ದವಗೆ ಜಾಸ್ತಿ ಪ್ರಪೋಸು
    ಹಣಕಾಸಿನ ಅರ್ಧಾಂಗಿ
    ಕಾಸು ಇದ್ದವನ ಫೋಸು ತುಸು ಜಾಸ್ತಿಯೇ
    ಕಾಶಿಗೆ ಹೋಗಲು ಬೇಕಾದ ದ್ರವ್ಯ
    ಮನೆ ಮನಿ ಕತೆ
    ಇದು ಉಳ್ಳವರೆಲ್ಲಾ ದೊಡ್ಡಪ್ಪರೇ
    ಕಸುವುಳ್ಳವರು ಮಾತ್ರ ಗಳಿಸಬಹುದಾದದ್ದು
    ಕಸುಬಿದ್ದರೆ ಕಸದಿಂದಲೂ ಕಾಸು ತೆಗೆಯಬಹುದು
    ಕಾಸಿದ್ದವನು ಹೂಸು ಬಿಟ್ಟರೂ ಸುವಾಸನೆಯೇ
    ಪಿತ್ಥವೇರಿಸುವ ವಿತ್ತ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.