ಪೆಟ್ರೋಲ್
ಆರಕ್ಕೇರುವ ಮೂರಕ್ಕಿಳಿಯದ ಭೂಲೋಕದ ಪೀಯೂಷ
ಸರ್ಕಾರಗಳ ಅಳಿವು ಉಳಿವಿನಲ್ಲಿ ಮೈನ್ರೋಲ್ ಇದರದ್ದೇ
ಇಟ್ಟಲ್ಲೇ ಆರುವ ಮತ್ತು ಏರುವ ಸ್ವಭಾವದ್ದು
ವಾಹನ ಸವಾರರ ಪೆಟ್
ಹೆಲ್ಮೆಟ್ ಹಾಕಿಕೊಂಡರೂ ಇದರ ಪೆಟ್ಟು ತಪ್ಪದು
ಅಮಲು ಇಳಿಸುವ ಎಣ್ಣೆ
ಬೈಕ್ ಹೊಡೆಯುವ ಬಯಕೆಗೆ ತಣ್ಣೀರೆರಚುವ ಬಿಸಿ ತೈಲ
ಸೈಕಲ್ನಂಥ ವಾಹನ ಇನ್ನೊಂದಿಲ್ಲ...ಪೆಟ್ರೋಲ್ಗೆ ಹಣವಿಲ್ಲದಾಗ
ವಾಕಿಂಗ್ ಮಾಡುವವರ ಸಂಖ್ಯೆ ಹೆಚ್ಚಳಕ್ಕೆ ಇದೇ ಕಾರಣ
ಪೇಟೆಯಲ್ಲಿ ಪೆಟ್ರೋಲ್ ಬಂಕ್ ಉಳ್ಳ ಗಂಡು ಸಿಕ್ಕರೆ ಕನ್ಯಾ ಪಿತೃಗಳು ಬಿಟ್ಟುಕೊಳ್ಳಬಾರದು
ನೀರು ಮೂತ್ರ ತರಿಸುತ್ತದೆ. ಪೆಟ್ರೋಲ್ ಹೊಗೆ ಹಾಕಿಸುತ್ತದೆ
ಡೀಸೆಲ್ ಬೆಳ್ಳಿ, ಪೆಟ್ರೋಲ್ ಬಂಗಾರ. ಪೆಟ್ರೋಲ್ ಬಂಕ್ ಚಿನ್ನದ ಗಣಿ
ಧನವುಳ್ಳವ ಮಾತ್ರ ಕೊಳ್ಳಬಹುದಾದ ಇಂಧನ
ಇಟ್ಟಲ್ಲೇ ಆರಕ್ಕೂ ಏರಬಲ್ಲುದು, ಆರಲೂಬಹುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

