ಸಂಪಾದಕೀಯ

ಕಾಯಿದೆ

Published On :

ಕಾಯಿದೆ ಇದೆಯೆಂದು ಯಾರೂ ಕಾಯುವುದಿಲ್ಲ
    ಒಳಗೆಲ್ಲ ಹಣ್ಣಾಗಿ ಕೊಳೆತರೂ ಹೊರಗೆ ಮಾತ್ರ ಕಾಯಿ
    ಉಲ್ಲಂಘಿಸಿದಾಗ ಮಾತ್ರ ಇದರ ಅಸ್ತಿತ್ವ ನೆನಪಾಗುತ್ತದೆ
    ವಾಯಿದೆ ಮೀರಿದರೆ ಆಗ ಕಾಯಿದೆ ಜಾಗೃತವಾಗುತ್ತದೆ
    ಇದೊಂಥರ ಹಿರಿಯರ ಉಪದೇಶ ಇದ್ದ ಹಾಗೆ. ಮಾಡಬೇಡ ಎನ್ನುತ್ತದೆ..ಕೇಳುವವರೇ ಇಲ್ಲ
    ಇದನ್ನು ತಿಳಿದುಕೊಂಡು ಲಾಯರ್ ಆಗಬಹುದು, ನಂತರ ಕಾನೂನನ್ನು ಕಾನೂನಿನಿಂದಲೇ ಮುರಿಯಬಹುದು
    ಇದಕ್ಕೆ ಕಾನ್(ಕಿವಿ) ಇಲ್ಲ. ಅದಕ್ಕೇ ಇದು ಕಾನೂನು
    ಲಾ ತಿಳಿದುಕೊಂಡವನೇ ಸಮಾಜದಲ್ಲಿ ದೊಡ್ಡ ಜನ ಕಣಲಾ
    ಲಾ ಗಳನ್ನೆಲ್ಲ ಪಾಲಿಸಲು ಹೊರಟವನ ಪಾಲಿಗೆ ಲಾಸ್ ಆಗುವುದೇ ಪ್ರತಿಫಲ
    ಅನರ್ಥಗಳ ನಿಯಂತ್ರಿಸುವ ಅನರ್ಥ ಕೋಶ
    ದೊಡ್ಡವರ ಉಳ್ಳವರ ಕಾವಲುಗಾರ
    ಶ್ರೀಸಾಮಾನ್ಯನ ಪೆಡಂಬೂತ
    ಅತಿಯಾದರೆ ಇದು ಪ್ರಜಾಪ್ರಭುತ್ವದ ಕಾಯಿಲೆ
    ಆಗಾಗ ಕಳಚಿ ಬೀಳುವ ಮತ್ತು ಹೊಲಮೇಯುವ ಬೇಲಿ
    ನಮ್ಮ ಕುತ್ತಿಗೆಗೆ ಕಟ್ಟಿ ಕೊಂಡಿರುವ ಪಾಶ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.