ವಿಪರ್ಯಾಸ
ವಿರೋಧದ ಆಭಾಸ ಮತ್ತು ಅಸಂಬದ್ಧ ಅವಭಾಸ
ಇಂಗ್ಲೀಷಿನ ಐ್ಠ್ಟಟಿಣ. ಉದಾಹರಣೆಗೆ, ಹೊರಗಡೆ ಐರನ್ ಹಾಕಿದ ಬಟ್ಟೆ, ಒಳಗೆ ಹರಿದ ಬನಿಯನ್ನು.
ಹೊಟ್ಟೆ ತುಂಬಿಸುವ ಅನ್ನದಾತನಿಗೇ ಹೊಟ್ಟೆಪಾಡಿಗೆ ಗತಿಯಿಲ್ಲದಿರುವ ಸ್ಥಿತಿ
ಒಂದು ಕಡೆ ಒಪ್ಪೊತ್ತಿನ ಊಟಕ್ಕೆ ಬರಗಾಲ, ಇನ್ನೊಂದೆಡೆ ತುಂಬಿದ ಹೊಟ್ಟೆಗೆ ಮೇಲೆರಡು ಲಡ್ಡು
ಮನುಷ್ಯ ಹಣವನ್ನು ಸೃಷ್ಟಿಸುತ್ತಾನೆ. ಆದರೆ ಹಣ ಮನುಷ್ಯತ್ವವನ್ನೇ ಕೊಲ್ಲುತ್ತದೆ
ದೂರದ ಸಂಬಂಧಿಕರೇ ಹೆಚ್ಚು ಹತ್ತಿರವಾಗುವುದು ಮತ್ತು ಹತ್ತಿರದವರು ದೂರದವರೆನಿಸುವುದು
65 ವರ್ಷ ಜನರ ದುಡ್ಡಲ್ಲಿ ಆಳಿದರೂ ದೊಡ್ಡವರಾಗಿದ್ದು ಒಂದು ಕುಟುಂಬ ಮಾತ್ರ..
ಹಲವು ದೇಶಗಳಲ್ಲಿ ಪ್ರಜಾ ಸಂಪತ್ತಿಲ್ಲದೇ ಗೋಳಿಡುತ್ತಿದ್ದರೆ ನಮ್ಮಲ್ಲಿ ಜನಸಂಖ್ಯೆಯೇ ಶಾಪವಾಗಿದೆ
ಶೋಕಾಚರಣೆಗೆಂದು ಕೊಡುವ ರಜೆ ಮಜಾ ಮಾಡುವುದಕ್ಕಾಗಿಯೇ ವಿನಿಯೋಗವಾಗುವಿಕೆ
ಅಪ್ರಾಮಾಣಿಕ ತಲೆ ಎತ್ತಿ ತಿರುಗುವಿಕೆ, ಅಮಾಯಕನಿಗೆ ಶಿಕ್ಷೆ ಒದಗುವಿಕೆ
ಶ್ರಮ ತೊಟ್ಟು ಬೇರೆಯವರ ಆಯಾಸ ನೀಗಿಸುವವರಿಗೆ ಆಯಾಸ ನೀಗಿಸಿಕೊಳ್ಳಲು ಸಮಯವೇ ಇಲ್ಲದಿರುವುದು
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

