ಸಂಪಾದಕೀಯ

ದೂರು

Published On :

ವಿಪಕ್ಷಗಳ ಪೂರ್ಣಕಾಲಿಕ ವೃತ್ತಿ
    ದುಮ್ಮಾನದ ಸಹೋದರ
    ಮೇಲಿನವರು ಕೆಳಗೆ ದೂಡುತ್ತಾರೆಂಬ ಆಕ್ಷೇಪ
    ಕಂಪೆನಿಯ ಮೇಲಿನ ಕಂಪ್ಲೇಂಟ್
    ಎಲ್ಲರೂ ನನ್ನನ್ನೇ ದುರುದುರು ನೋಡುತ್ತಾರೆ ಎನ್ನುವ ಹುಡುಗಿಯ ಗೊಣಗಾಟ
    ನನ್ನನ್ನು ಪದೇ ಪದೇ ದೂರದೂರಿಗೆ ವರ್ಗಾಯಿಸುತ್ತರೆಂಬ ನೌಕರನ ಅಳಲು
    ದೂರುವ ಸಂಬಂಧಿಕರೇ ಎಲ್ಲ. ದೂರದ ಸಂಬಂಧಿಕರು ಇಲ್ಲ
    ಉರುವಲಿಗೆ ದಾರು (ಕಟ್ಟಿಗೆ) ಸಿಗುತ್ತಿಲ್ಲವೆಂಬ ಹಳಹಳಿಕೆ
    ಕೆಲವರದು ದೂರದೃಷ್ಟಿ. ಹಲವರದು ದೂರುವ ದೃಷ್ಟಿ
    ಧಾರಾವಾಹಿಗಳನ್ನು ದಾರದಂತೆ ಎಳೆಯುತ್ತಿದ್ದಾರೆಂಬ ಅಸಮಾಧಾನ
    ದೂರುವವರನ್ನು ದೂರವಿಡು.
    ಕೊಂಕು ತೆಗೆವ ಮಂಕು ಬುದ್ಧಿಯವರ ದೂರುವ ರೋಗದ ದೂರಗಾಮಿ ಪರಿಣಾಮವೇನೆಂದರೆ ಯಾರೂ ಅವರ ಬಳಿಸಾರಲಾರರು
    ದರ ಏರಿದಾಗೆಲ್ಲ ದೊರೆಯ ದೂರುವುದು ಜವಾಬ್ದಾರಿ ಪ್ರಜೆಯ ಲಕ್ಷಣವಲ್ಲ
    ಯಾವತ್ತೂ ಏನಾದರೊಂದು ಹುಳುಕನ್ನು ಹುಡುಕಿ ದೂರುವ ದೃಷ್ಟಿಕೋನಕ್ಕೆ ದೂರುದೃಷ್ಟಿ ಎನ್ನಬಹುದು

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.