ಸಂಪಾದಕೀಯ

ಭ್ರಷ್ಟಾಚಾರ

Published On :

ವ್ಯವಸ್ಥೆಯೆಂಬ ಓಝೋನ್ ಪರದೆಯಲ್ಲಿನ ತೂತು
    ಸಮಾಜದ ಮೇಲೆ ಕೆಲವರು ನಡೆಸುವ ಅತ್ಯಾಚಾರ
    ವಿಶ್ವವಿದ್ಯಾನಿಲಯಗಳಲ್ಲೂ ಇದು ಗೂಡು ಕಟ್ಟಿ ಬೀಡು ಬಿಟ್ಟಿರುವುದು ಇದರ ವಿಶ್ವವ್ಯಾಪಕತೆಗೆ ಸಾಕ್ಷಿ
    ರೋಗಿ ಬಯಸಿದ ಹಾಲನ್ನೇ ವೈದ್ಯ ಬರೆಯುತ್ತಾನೆ, ಅವನಿಗೆ ಚಹಾ ಕುಡಿಸಬೇಕಷ್ಟೆ.
     ಇದೊಂಥರಾ ಪೈಲ್ ರೋಗ (ಮೂಲವ್ಯಾಧಿ) ಕಾರಣ, ಫೈಲ್ ಮುಂದೆ ತಳ್ಳಲು ಮೇಜಿನಿಂದ ಕೆಳಗೆ ತಳ್ಳುವ ಅನಾಚಾರ
    ಭ್ರಷ್ಟರ ಲಂಚ್
     ಆಫೀಸಿನಲ್ಲಿ ಇರುವ ಸಮಯವೆಲ್ಲ ಕೆಲವರಿಗೆ ಪೀಕ್ ಅವರ್ ಆದರೆ ಇನ್ನು ಹಲವರಿಗೆ ಪೀಕುವ ಅವರ್
    ಸಮಾಜವನ್ನೇ ಭಕ್ಷಿಸುವ ಭಕ್ಷೀಸು ಪ್ರಧಾನ ವ್ಯವಸ್ಥೆ
    ದಾಕ್ಷಿಣ್ಯ ಬಿಟ್ಟು ದಕ್ಷಿಣೆಗಾಗಿ ಕೈಯ್ಯೊಡ್ಡುವ ದಕ್ಷಿಣಾಯನ
    ಅಣ್ಣಾ ಹಜಾರೆಯಂಥಾ ಹಜಾರ್ ಅಣ್ಣಾಗಳು ಬಂದರೂ ಇದನ್ನು ತೊಲಗಿಸುವುದು ಸುಲಭವಲ್ಲೋ ಅಣ್ಣಾ
    ಲಾಭದ ಆಸೆ, ಲೋಭದ ಮೂಸೆ
    ಅರ್ಥಶಾಸ್ತ್ರವ ಓದಿ ಸ್ವಾರ್ಥಶಾಸ್ತ್ರವ ಅನ್ವಯಿಸಿಕೊಂಡುದರ ಪರಿಣಾಮ
    ನಿಯತ್ತು ಕಡಿಮೆಯಾದಾಗ ಒದಗುವ ಆಪತ್ತು
    ಇದಕ್ಕೆ ಮ್ಯಾಕ್ಸಿಮಮ್ ಪ್ರೈಸ್ ಅನ್ವಯಿಸುವುದಿಲ್ಲ
    ಸುಲಿಗೆ ಯಂತ್ರ
    ಸರ್ಕಾರೀ ಕೆಲಸ ದೇವರ ಪೂಜೆ ಇದ್ದಂಗೆ. ಇಲ್ಲಿ ಲಂಚಾಮೃತವೇ ಪಂಚಾಮೃತ


ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.