ಅತಿ
'ಮಿತಿ'ಯನ್ನು ಮೀರಿದ್ದು
ಸತಿಪತಿಗಿದು ನಿಷಿದ್ಧ; ಎಲ್ಲ ವಿಷಯದಲ್ಲೂ
ಅತಿಯನ್ನು ಸರ್ವತ್ರ ವರ್ಜಿಸಬೇಕಂತೆ ಅರ್ಜಿಸುವ ವಿಷಯದಲ್ಲೂ...
ಅತಿಗೆ ಅಂತ್ಯವೆಂಬುದಿಲ್ಲ ಹಾಗಾಗಿಯೇ ಅದು ಅತ್ಯಂತ
ಅನಗತ್ಯ ಹೆಚ್ಚು-ಗಾರಿಕೆ
ಅತಿಯಾದರೆ ಹಾಲೂ ಕೋಕೋಕೋಲಾ ಆಗುತ್ತದೆ
ಅಲ್ಪಕ್ಕಿಂತ ಸ್ವಲ್ಪ ಹೆಚ್ಚು
ಬೇಕುಗಳಿಗೆ ಬ್ರೇಕು ಹಾಕದೇ ಇರುವುದರ ಪರಿಣಾಮ
ಇತಿಯ ವಿರುದ್ಧಾರ್ಥಕ
ಭೋಜನ, ಮೈಥುನ ಮತ್ತು ಭಾಷಣಗಳಲ್ಲಿ ವರ್ಜಿಸಬೇಕಾದದ್ದು
ಯತಿಯ ಪ್ರತಿ ಹೆಜ್ಜೆಯಲ್ಲೂ ಇದು ಪರೀಕ್ಷಕನೇ
ಅತಿ ವಿನಯ, ಅತಿ ಪ್ರೀತಿ, ಅತಿ ಸ್ನೇಹ ಈ ಮೂರ್ತಿಗಳನ್ನು ನಂಬಬಾರದು
ಅತಿ ಎಂಬುದು ಅವಿವೇಕದ ಫಲ, ಮಿತಿ ವಿವೇಕದ ಬಲ
ಅತಿ ಆಸೆ, ಗತಿ ದೋಸೆ
ಪ್ರತಿ ಹಂತದಲ್ಲೂ ಅತಿಯನ್ನು ಗೆದ್ದವನೇ ಅತಿ ಪ್ರತಿಭೆ ಎನಿಸಿಕೊಳ್ಳುತ್ತಾನೆ
ಪ್ರಯೋಜನ
ಎಲ್ಲ ಜನರಿಗೆ ಆಗುವ ಉಪಯೋಗ
ಎಲ್ಲ ಕಾರ್ಯಗಳ ಅಂತಿಮ ಉದ್ದೇಶ
ಎಲ್ಲ ಜನರನ್ನು ಸಕ್ರಿಯರಾಗಿಸುವ ಪ್ರೇರಕ
ಯೋಜನದಷ್ಟು ದೂರ ಹನುಮ ಹಾರಿದ ಹಿನ್ನೆಲೆ
ಎಲ್ಲ ಪ್ರಯೋಗಗಳ ಹಿಂದಿರುವ ಗುಟ್ಟು
ಕಾರ್ಯದ ಪರಿಣಾಮ
ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

