ಚಕ್ರ
ಚಕ್ರ
ಕಂಡ ಕಂಡಲ್ಲಿ ತಿರುಗುವ ತಿರುಕ
ವೇಗ ಆವೇಗ ಎರಡೂ ಇದರದ್ದೇ
ಇದರದ್ದೇನಿಲ್ಲ, ಮೇಲಿರುವವನ ಇಚ್ಛೆ ಎಲ್ಲ
ಇದರ ಶತ್ರುವೆಂದರೆ ಒಂದೇ ಒಂದು, ಅದು ಚೂಪಾದ ಮುಳ್ಳು
ಚಕ್ರಕ್ಕೆ ಸಾವಿಲ್ಲ ಅಡಿಗೆ ಸಿಕ್ಕವರಿಗಿದೆ
ಉರುಳುತ್ತಾ ತೆರಳುವಂಥದ್ದು
ಭೂಮಿ ಬಿಟ್ಟು ನೀರ ಮೇಲೆ ಚಕ್ರ ಸಾಗದು
ಚಕ್ರವೇನಾದರೂ ಅಡ್ಡ ದಾರಿ ಹಿಡಿದರೆ ನಿಮ್ಮ ತಲೆಗೆ ಚಕ್ರ ಬಂತೆಂದೇ ಅರ್ಥ
ದಳ ವಿದಳವಾಗುವುದಕ್ಕಿಂತಲೂ ಮುಂಚೆ ಹೊಂದಿದ್ದ ಚಿಹ್ನೆ
ಮುಂದೆ ಸಾಗಿದರೆ ಪ್ರಗತಿ, ಹಿಂದೆ ಸರಿದರೆ ಅವನತಿ
ಮಾನವ ಚಕ್ರ ಕಂಡುಹಿಡಿಯದಿದ್ದರೆ ಚಿಲ್ಲರೆ ಸಮಸ್ಯೆ ಇರುತ್ತಿರಲಿಲ್ಲ, ಯಾಕೆಂದರೆ ಆಗ ಬಸ್ಸು, ಕಂಡಕ್ಟರ್ ಯಾರೂ ಇರುತ್ತಿರಲಿಲ್ಲ
ಛಕ್ ಎಂದು ಹಲವು ದೂರ ಕ್ರಮಿಸುವುದರಿಂದ ಇದು ಚಕ್ರ
ಇದು ಮೈಲಿಗಲ್ಲುಗಳನ್ನು ದಾಟುವ ಮೂಲಕವೇ ಹಲವು ಮೈಲಿಗಲ್ಲು ಸ್ಥಾಪಿಸುತ್ತದೆ
ಊರೆಲ್ಲ ಸುತ್ತಿ ಬಂದು ಮನೆಯ ಬಳಿ ಕುಕ್ಕರಿಸುವ ಚಾರ
ಚರಾಚರ ವಸ್ತುಗಳಲ್ಲಿ ಇದು ಚರವಸ್ತು

ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.