ರಾಜಕಾರಣಿ
ರಾಜಕಾರಣಿ
ಹಚ್ಚಿಕೊಟ್ಟು ಕಿಚ್ಚು ಇಡುವವ
ಖುರ್ಚಿಗಾಗಿ ಖರ್ಚು ಮಾಡಿ ಖರ್ಚಿಗೆಂದು ಸಂಪಾದಿಸಿಕೊಳ್ಳುವವ
ಎಷ್ಟು ಸಲ ಸೋಲು ಎದುರಾದರೂ ರಾಜಿಯಾಗದವ
ಚದುರಂಗದಾಟದ ಸಿಫಾಯಿ
ಸೇವೆಯನ್ನೂ ಲಾಭಕರವಾಗಿಸಿಕೊಳ್ಳಬಹುದಾದ ಉದ್ಯೋಗವಿದು
ಹುಲಿ ಕೂಡ ಹುಲ್ಲು ತಿನ್ನುವುದಿಲ್ಲ, ಆದರೆ ಈತ ತಿನ್ನಬಲ್ಲ
ಜೈಲಿನಲ್ಲೂ ಗೌರವ, ಆದರವನ್ನು ಪಡೆಯಬಲ್ಲವ
ಈತನ ಜೀರ್ಣ ವ್ಯವಸ್ಥೆ ಅದೆಷ್ಟು ಗಟ್ಟಿಯೆಂದರೆ ಈತ ರಸ್ತೆಯ ಡಾಂಬರು, ಜಲ್ಲಿ ಕಲ್ಲನ್ನೇ ತಿಂದು ಅರಗಿಸಿಕೊಳ್ಳಬಲ್ಲ
ಒಳಗೆ ಶತದಡ್ಡ, ಹೊರಗೆ ಜನನಾಯಕ
ಕೆಸರೆರಚಾಟವೇ ಇವನ ಚಟ. ಕೆಸರಿನಲ್ಲಿರುವವರು ಮತ್ತೇನು ಮಾಡಿಯಾರು?
1947ರವರೆಗೆ ಭಾರತ ಆಂಗ್ಲರ ಆಡಳಿತಕ್ಕೊಳಪಟ್ಟಿತ್ತು, ಸಂಪತ್ತು ಬ್ರಿಟನ್ಗೆ ಹೋಗುತ್ತಿತ್ತು
ಈಗ ರಾಜಕಾರಣಿಗಳು ಆಳುತ್ತಿದ್ದಾರೆ, ಸಂಪತ್ತು ಸ್ವಿಸ್ಬ್ಯಾಂಕ್ಗೆ ಹೋಗುತ್ತಿದೆ
ಒಳ್ಳೆಯ ರಾಜಕಾರಣಿಯೆಂಬುದು ಎರಡು ವಿರೋಧಾಭಾಸದ ಪದಗಳು
ಕೆಲವರು ಉತ್ತಮರೂ ರಾಜಕಾರಣದಲ್ಲಿರುತ್ತಾರೆ ಹಾಗಂತ ಅವರನ್ನು ರಾಜಕಾರಣಿ ಎಂದು ಹೀಗಳೆಯುವುದು ತಪ್ಪು!
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

