ರಾಜಕಾರಣಿ
ರಾಜಕಾರಣಿ
ದೇಶ ಭಾಷೆ ಗೊತ್ತಿಲ್ಲದಿದ್ದರೂ ದೇಶವಾಳುವ ಕನಸು ಕಾಣುವವ
ಇವನ ಸಮೀಪ ಹೋದರೆ ಭರವಸೆ, ಆಶ್ವಾಸಗಳದ್ದೇ ವಾಸನೆ
ಪಾಪಾಚಾರಿ
ಬೊಗಳೆ, ಭೋಂಗು ಮುಂತಾದ ಪದಗಳ ಸಮಾನಾರ್ಥಕ
ನೈತಿಕತೆಯನ್ನೆಲ್ಲ ನೀತಿಕತೆಗೇ ಸೀಮಿತವಾಗಿಸಿದವ
ಬುದ್ಧಿವಂತರೆಲ್ಲ ತಮ್ಮ ಬುದ್ಧಿಯನ್ನು ಮನೆಯಲ್ಲೇ ಬಚ್ಚಿಟ್ಟಿರುವುದರಿಂದ ಆರಿಸಿ ಬಂದ ಅಯೋಗ್ಯ
ನಿಸ್ವಾರ್ಥ, ಪ್ರಾಮಾಣಿಕ ವ್ಯಕ್ತಿಗಳು ರಾಜಕೀಯ ಸೇರಿದರೆ ಅವರು ಒಂದೋ ಆ ಗುಣಗಳನ್ನೆಲ್ಲ ಬಿಡಬೇಕು ಅಥವಾ ರಾಜಕೀಯವನ್ನೇ ಬಿಡಬೇಕು
ಬಾಲ್ಯದಲ್ಲೇ ಸುಳ್ಳು ಹೇಳುವ, ಮೋಸ ಮಾಡುವಂಥ ಸ್ವಭಾವದ ಮಕ್ಕಳನ್ನು ಕಡೆಗಣಿಸಬಾರದು, ಮುಂದೊಂದು ದಿನ ಅವನು ನಾಡನ್ನೇ ಆಳಬಹುದು
ಇವನಿಗೆ ದರೋಡೆಕೋರರನ್ನೂ, ರೌಡಿಗಳನ್ನೂ ಕಂಡರೆ ಅಸೂಯೆ..ವೃತ್ತಿಮಾತ್ಸರ್ಯ
ಅಧಿಕಾರ ಕುದುರೆ. ಕುದುರೆಯ ಮೇಲೆ ಕತ್ತೆ ಸವಾರಿ ಮಾಡುತ್ತದೆ
ಬೇರೆ ಯಾವುದೇ ಉದ್ಯೋಗದಲ್ಲಿ ಯಶಸ್ಸು ಗಳಿಸಲಾಗದವ ಇಲ್ಲಿ ಲಾಭ ಗಳಿಸಬಹುದು
ಈತ ವ್ಯವಸ್ಥೆಯನ್ನು ಮೊದಲು ಅಶುದ್ಧಗೊಳಿಸುತ್ತಾನೆ, ಕಾರಣ ವ್ಯವಸ್ಥೆಯನ್ನು ಶುದ್ಧಗೊಳಿಸಬೇಕಲ್ಲಾ...
ಈತ ಸಾತ್ವಿಕ, ಆದರೆ ಅದು ರಾಜಕಾರಣದಲ್ಲಿ ಕೆಲಸಕ್ಕೆ ಬರುವುದಿಲ್ಲವೆಂದು ಅದನ್ನು ತ್ಯಜಿಸಿದವ
ನಿವೃತ್ತಿಯೆಂಬುದಿಲ್ಲದ ವೃತ್ತಿ ಈತನದು
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

