ಸರ್ಕಾರ ನಿರ್ವಹಿಸಿದ ಬಂದ್
ಅನೇಕ ಕನ್ನಡಪರ ಸಂಘ-ಸಂಸ್ಥೆಗಳು, ವಾಟಾಳ್ ನಾಗರಾಜ್ರ ಬೆಂಗಳೂರು ಬಂದ್ಗೆ ಗುರುವಾರ ಬೆಂಬಲ ನೀಡಿದ್ದವು. ಆ ಬಂದ್ನ ಉದ್ದೇಶ ಯಾರಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ. ಆದರೂ ಅದು ಯಾರ ವಿರುದ್ಧವೂ ಅಲ್ಲ, ಸರ್ಕಾರದ ವಿರುದ್ಧವಂತೂ ಖಂಡಿತ ಅಲ್ಲ ಎನ್ನುವ ವಿವರಣೆಯನ್ನು ನೀಡಲಾಗಿತ್ತು.
ಬಂದ್ ಸಂಘಟನೆಯಲ್ಲಿ ಯಾರ್ಯಾರಿದ್ದರು ಎನ್ನುವುದು ಯಾರಿಗೂ ಮುಖ್ಯವಾಗಿರಲಿಲ್ಲ. ಸಾರ್ವಜನಿಕರಿಗೆ ಬೇಕಾಗಿದ್ದು ಹಿಂಸಾಚಾರವನ್ನು ತಡೆಗಟ್ಟಲು ಸೂಕ್ತ ಕಾರ್ಯಕ್ರಮವನ್ನು ಸರ್ಕಾರ ಕೈಗೊಂಡಿದೆಯೇ ಎನ್ನುವ ಪ್ರಶ್ನೆಗೆ ಉತ್ತರ. ಅದು ಬುಧವಾರವೇ ಸಿಕ್ಕಿತ್ತು. ಸರ್ಕಾರ ಬಂದ್ನಲ್ಲಿ ಪ್ರಮುಖ ಕಾರ್ಯಕರ್ತರ ಜತೆ ಮಾತುಕತೆ ನಡೆಸಿ ಸರಿಯಾದ ಬಂದೋಬಸ್ತ್ ಮಾಡಿತ್ತು.
ಸರ್ಕಾರವೇ ಸಹಿಸಿಕೊಂಡು, ನಿರ್ವಹಿಸಿದ ಬಂದ್ ಇದು ಎನ್ನುವ ವಾತಾವರಣ ಗುರುವಾರ ಮೂಡಿತ್ತು. ಬೆಂಗಳೂರಿನ ನಾಗರಿಕರಿಗೆ ಇದೊಂದು ಹೊಚ್ಚಹೊಸ ಅನುಭವ. ಎಲ್ಲೂ ಹಿಂಸಾಚಾರದ ಸುಳಿವೇ ಇಲ್ಲದೇ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ಬಂದ್ ಆಚರಣೆ ಆಯಿತು ಎನ್ನುವುದೇ ತೃಪ್ತಿ.
ಬಂದ್ಗೆ ಕರೆ ನೀಡಿದ್ದ ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್, ಅವರಿಗೆ ಬೆಂಬಲ ನೀಡಿದ ಕನ್ನಡಪರ ಸಂಘಟನೆಗಳ ನಾಯಕರು-ಕಾರ್ಯಕರ್ತರು ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಯಾರ ಜತೆಯಲ್ಲೂ ಅವರು ಜಗಳವಾಡಿಲ್ಲ.
ಇಷ್ಟವಿದ್ದವರು, ಸಾಧ್ಯವಾದವರು ಅವರವರ ಕೆಲಸಕ್ಕೆ ಹೋಗಿದ್ದಾರೆ. ಉಳಿದವರು ಮನೆಯಲ್ಲೇ ವಿಶ್ರಾಂತಿ ಪಡೆದಿದ್ದಾರೆ. ಬಂದ್ಗೆ ಸರ್ಕಾರದ ಪ್ರಚೋದನೆ ಇರಲಿಲ್ಲ. ಆದರೆ ಬಂದ್ ವಿಚಾರದಲ್ಲಿ ಸಹಾನುಭೂತಿ ಇದ್ದಿದ್ದು ಸ್ಪಷ್ಟವಾಗಿ ಗೋಚರವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

