ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಪಕ್ಕದಲ್ಲಿ ಯಾರಿರಬೇಕು?
ಪರಶುರಾಮ, ಶಿಕಾರಿಪುರ, 9902203492
ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು. ಪಕ್ಕದಲ್ಲಿ ಯಾರಿರಬೇಕು?
ಗುರಿ ತಲುಪುವ ಮೊದಲು ಹೆಚ್ಚು ಕಡಿಮೆಯಾದರೆ ಬಲಿಕೊಡಲು ಒಬ್ಬ ಕುರಿ ಇರಬೇಕು!
ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಪಕ್ಷದ ಪ್ರಚಾರಕ್ಕಾಗಿ ರಾಜಕಾರಣಿಗಳು ಕ್ಯಾಟ್‌ವಾಕ್ ಮಾಡಿದರೆ?
ಬೆಕ್ಕಸಬೆರಗಾಗಿ ವೋಟು ಕೊಟ್ರೆ ಬೊಕ್ಕಸ ಬರಿದು!
ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಶಾಲಾ ಶಿಕ್ಷಕರಿಗೂ ಅರ್ಹತಾ ಪರೀಕ್ಷೆ ಏಕೆ ಭಟ್ರೇ?
ಅದರಲ್ಲೊಂದರಲ್ಲಾದರೂ ಅರ್ಹತೆ ಇರಲಿ ಬಿಡಿ.
ಶ್ರೀಧರ ಡಿ. ರಾಮಚಂದ್ರಪ್ಪ, 9880791106
ಅವಳ ನಾಚಿದ ನಗುವಿಗೆ ಸ್ನೇಹವೆಂದು ಹೆಸರಿಡಲೋ, ಪ್ರೇಮವೆಂದೋ?
ನಗುವಿಗೆ ಹೆಸರು ಹುಡುಕುವಷ್ಟರಲ್ಲಿ ಮಗುವಿಗೆ ಹೆಸರು ಹುಡುಕುವ ಕಾಲ ಬಂದೀತು, ಹುಷಾರು!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಬರೀ ಪ್ರೇಮದ ವಿಷಯವೇ ಇರುವ 'ಪ್ರೇಮ ಪತ್ರಿಕೆ'ಯನ್ನು ಆರಂಭಿಸಿದರೆ ಹೇಗೆ?
ಹೆಚ್ಚಿನ ಆಸಕ್ತಿಕರ ಮಾಹಿತಿಗೆ ಪ್ರೇಮಾಕುಮಾರಿಯನ್ನು ಸಂಪರ್ಕಿಸಬಹುದು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

