ಸಂಪಾದಕೀಯ

ಸಾಲು

Published On :

ಅಕ್ಷರಗಳನ್ನೆಲ್ಲ ಶಬ್ದದ ರೂಪದಲ್ಲಿ ಒಟ್ಟಿಗೇ ಪೋಣಿಸಿದ ಮಾಲೆ
    ಪಡಿತರ ಅಂಗಡಿಯ ಮುಂದೆ ಯಾವತ್ತೂ ಇದನ್ನು ನೋಡಬಹುದು
    ನಗರಗಳಲ್ಲಿ ಎಲ್ಲದಕ್ಕೂ ಶ್ರೀಸಾಮಾನ್ಯ ಇದರಲ್ಲಿ ನಿಲ್ಲುವುದು ಸಾಮಾನ್ಯ, ಮೂತ್ರಾಲಯಕ್ಕೆ ಹೋದರೂ...
    ಸಾಲ ಕೊಡುತ್ತೇನೆಂದು ಹೇಳಿದರೆ ನಿಮ್ಮ ಮನೆ ಮುಂದೆಯೂ ಕ್ಷಣಾರ್ಧದಲ್ಲಿ ಸಾಲು ನಿರ್ಮಾಣವಾಗುತ್ತದೆ
    ಪ್ರಯತ್ನ ಸಾಲದಿದ್ದರೆ, ಸೋಲು ಸಾಲುಗಟ್ಟುತ್ತದೆ
    ಇಹಲೋಕದಲ್ಲಿ ಸಂಚರಿಸಲೆಂದು ಟಿಕೆಟ್ ಕೊಳ್ಳಲು ಸಾಲಲ್ಲಿ ನಿಲ್ಲಬೇಕು, ಪರಲೋಕಕ್ಕೆ ಟಿಕೆಟ್‌ಕೊಳ್ಳಲು ಮಾತ್ರ ಇದಿಲ್ಲ
    ಸಾಕು ಸಾಕೆನ್ನುವ ಮನೋಭಾವದವನಿಗೆ ಸ್ವಲ್ಪವೇ ಇದ್ದರೂ ಸಾಲುತ್ತದೆ.
    ಬೇಕು ಬೇಕೆನ್ನುವವಗೆ ಎಷ್ಟಿದ್ದರೂ ಸಾಲುವುದಿಲ್ಲ ಮತ್ತು ಅದಕ್ಕೋಸ್ಕರವೇ ಸಾಲಕ್ಕಾಗಿ ಸಾಲಲ್ಲಿ ನಿಲ್ಲಬೇಕಾಗುತ್ತದೆ
    ಸಾಲಲ್ಲಿ ನಿಂತರೆ ಕಾಲು ಸೋಲುತ್ತದೆ. ಕಾಲಲ್ಲಿ ನಿಂತರೂ ಕಾಲು ಸೋಲುತ್ತದೆ
    ಸಾಲದ್ದಕ್ಕೆ ಸಾಲ ತೆಗೆದುಕೊಳ್ಳಲೂ ಸಾಲಲ್ಲಿ ನಿಲ್ಲಲೇಬೇಕು
    ಸಾಲು ಸಾಲು ಸೋಲನ್ನು ಎದುರಿಸಲು ನೀವು ಸಿದ್ಧರಿಲ್ಲವೆಂದಾದರೆ ವಿಜಯಿಗಳ ಸಾಲಿನಲ್ಲಿ ನಿಲ್ಲಲೂ ಯೋಗ್ಯತೆಯಿಲ್ಲವೆಂದೇ ಅರ್ಥ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.