ಸಂಪಾದಕೀಯ

ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮಾತ್ರವೇ...

Published On :

ಜಗದೀಶ್. ಎಂ. ಸಂಗಣ್ಣವರ್
ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮಾತ್ರವೇ ಪಾದಯಾತ್ರೆ ಮಾಡುತ್ತಾರಲ್ಲ?
ಚುನಾವಣೆಯ ನಂತರ ಅವರ ಕಾಲು ನೆಲದ ಮೇಲಿರುವುದಿಲ್ಲವಲ್ಲ?

ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ
ಭಟ್ರೆ, ಪಾರ್ಲೇಜಿ ಮಗು ದೊಡ್ಡದಾಗಲೇ ಇಲ್ಲ, ನಿರ್ಮಾ ಹುಡುಗಿ ಬೆಳೆಯಲೇ ಇಲ್ಲ ಎಂದು ಕೆಲವರು ತಲೆಕೆಡಿಸಿಕೊಂಡಿದ್ದಾರಲ್ಲ?
43 ವರ್ಷವಾದರೂ ರಾಹುಲ್ ಯುವಕರಾಗೇ ಇದ್ದಾರಲ್ಲ ಎನ್ನುವ ಇನ್ನೊಂದು ಹುಳ ಬಿಟ್ಟು ನೋಡಿ.

ಶ್ರೀಮತಿ ನಿರ್ಮಲ ನಾಗರಾಜ್, ಟಿ. ನರಸೀಪುರ
ಹೆಂಡತಿ ಗರ್ಭಿಣಿಯಾದಾಗ, ಗಂಡ ಗಡ್ಡ ಬಿಡೋದ್ಯಾಕೆ ಭಟ್ರೆ?
ಡೆಲಿವರಿ ಖರ್ಚಿಗಾಗಿ ಶೇವಿಂಗ್ ಮಾಡದೇ ಹಣ ಸೇವ್ ಮಾಡ್ತಿರ್ತಾರೆ.

ಪ್ರಶಾಂತ್ ಮೇಲಾಡಿ, ತೀರ್ಥಹಳ್ಳಿ
ವರದಕ್ಷಿಣೆ ಬೊಂಬಾಟಾಗಿರಬೇಕು, ಹುಡುಗಿ ಸೂಪರ್ ಆಗಿರಲೇಬೇಕು ಎನ್ನುವ ವರ ಮಹಾಶಯನಿಗೆ ನಿಮ್ಮ ಸಲಹೆ ಏನು ಭಟ್ರೆ?
ಒಮ್ಮೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದು ಒಳಿತು...

ವಿ. ಹೇಮಂತಕುಮಾರ, ಬೆಂಗಳೂರು,
ಸ್ವತಂತ್ರವಾಗಿ ಜಾರುವ ಸೆರಗಿಗೇಕೆ ಪಿನ್ ಹಾಕುತ್ತಾರೆ?
ಪ್ಯಾಂಟಿಗೆ ಬೆಲ್ಟ್ ಹಾಕಿಕೊಳ್ಳದೆ ಅಡ್ಡಾಡಿ ನೋಡು ಉತ್ತರ ಗೊತ್ತಾಗುತ್ತೆ!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.