ಭಿಕ್ಷುಕರು ಮನೆ ಮುಂದೆ ಬಂದು ಅಮ್ಮಾ ತಾಯಿ ಎಂದೇ ಕೂಗುತ್ತಾರೆ. ಗಂಡಸರು ದಾನಿಗಳಲ್ಲವೇ?
ವಿ. ಹೇಮಂತಕುಮಾರ, 9035992900
ಭಿಕ್ಷುಕರು ಮನೆ ಮುಂದೆ ಬಂದು ಅಮ್ಮಾ ತಾಯಿ ಎಂದೇ ಕೂಗುತ್ತಾರೆ. ಗಂಡಸರು ದಾನಿಗಳಲ್ಲವೇ?
ಅವರು ಹೆಂಗಸರನ್ನು ಕೂಗುತ್ತಾರೆ ಎಂಬ ಕಾರಣಕ್ಕೇ ಗಂಡಸರು ದಾನ ಮಾಡಲ್ಲ!
ಐಗೂರು ರವಿಪ್ರಿಯ, 9483111096
ಚುನಾವಣೆಯಲ್ಲಿ ಸ್ಪರ್ಧಿಸುವ ಸಿನಿಮಾ ನಟಿಯರು ಮತಯಾಚನೆಗೆ ಬರುವಾಗ ಅಂಗಾಂಗ ಪ್ರದರ್ಶಿಸುವ ಉಡುಪುಗಳನ್ನು ಧರಿಸುವುದಿಲ್ಲ ಏಕೆ?
ಅದು ಮತದಾರರಿಗೆ ಆಮಿಷವೊಡ್ಡಿದಂತಾಗಿ ನೀತಿಸಂಹಿತೆ ಉಲ್ಲಂಘನೆಯಾಗುವುದರಿಂದ!
ಚಿರಪ್ರಭ ನಂಜನಗೂಡು, 8553793107
ಸಚಿವರೊಂದಿಗೆ ರೌಡಿಗಳು ಸೇರಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿರುವುದು ಏನನ್ನು ಸೂಚಿಸುತ್ತದೆ?
ಚುನಾವಣೆಯಲ್ಲಿ ತೋಳ್ಬಲ ಎಷ್ಟು ಮುಖ್ಯ ಎಂಬುದನ್ನು.
ಕೆ.ಎಂ. ಲಿಂಗರಾಜು, 9916021365
ಧರ್ಮಗಳ ಆಧಾರದಲ್ಲಿ ದೇಶ, ಜನರನ್ನು ವಿಭಜಿಸಿದವರು ಈಗ ವೀರಯೋಧರನ್ನು ವಿಭಜಿಸುತ್ತಿದ್ದಾರಲ್ಲಾ?
ಲಾಭ ಆಗುತ್ತೆ ಅನ್ನೋದಾದರೆ ಗಂಡ-ಹೆಂಡತಿಯನ್ನು ವಿಭಜಿಸಲು ಹೇಸುವುದಿಲ್ಲ.
ಕೆ.ಎಂ. ಲಿಂಗರಾಜು, 9916021365
ಕೇಜ್ರಿವಾಲ್ ಕೆನ್ನೆಯ ಮೇಲೇಕೆ ಪ್ರತಿಯೊಬ್ಬರೂ ಕೈ ಮಾಡುತ್ತಿದ್ದಾರೆ?
ಅವರು ಕಾಂಗ್ರೆಸ್ನೊಂದಿಗೆ 'ಕೈ' ಮಿಲಾಯಿಸಿದ್ದಾರೆ ಎಂಬ ಶಂಕೆಯಿಂದ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

