ಎಣ್ಣೆ
= ಮುಟ್ಟಿದರೆ ಜಾರುವಷ್ಟು ನಯವಂತಿಕೆ ಇದರದ್ದು
= ಇದು ಹೆಣ್ಣಿನಂತೆ. ಕಾಲನ್ನು ಇಟ್ಟಲ್ಲೇ ಜಾರಿಸುತ್ತದೆ
= ಅಡಿಗೆಯಿಂದ ಹಿಡಿದು ಅಡಿಗಡಿಗೂ ಅಗತ್ಯವಿರುವ ದ್ರವ್ಯ
= ಇದು ದ್ರವವಸ್ತುವೇ ಹೌದಾದರೂ ಪಡೆಯುವುದು ಘನವಸ್ತುವಿನಿಂದ
= ಹೆಚ್ಚು ದಿನ ಇಟ್ಟರೆ ಇಟ್ಟಲ್ಲೇ ಕೆಟ್ಟ ವಾಸನೆ ಬೀರುವುದು
= ಖಾದ್ಯ ಕರಿಯಲ್ಪಡುವ ಮಾಧ್ಯಮ
= ತಿಲದಿಂದ ಮಾಡಿದ್ದಲ್ಲವಾದರೂ ಕರೆಯಲ್ಪಡುವುದು ತೈಲವೆಂದೇ
= ಸ್ನೇಹಗುಣ ಇದರಲ್ಲಿ ಜಾಸ್ತಿ. ಅಂಟಿಕೊಂಡಿದ್ದು ಬಿಡುವುದಿಲ್ಲವಲ್ಲ ಹಾಗಾಗಿ
= ತಲೆಗೆ ಹಚ್ಚಿಕೊಂಡರೆ ತಂಪು. ಹೊಟ್ಟೆಗೆ ಹಾಕಿದರೆ ಉರಿ
= ಅಬಕಾರಿ ಇಲಾಖೆಯ ಸಂಪತ್ತಿನ ಮೂಲ
= ಹೊಟ್ಟೆ ಬಟ್ಟೆ ಕಟ್ಟಿಕೊಂಡು ಉಳಿಸಿದ ಹಣವನ್ನು ಕೆಲವರು ಖರ್ಚು ಮಾಡುವುದು ಇದಕ್ಕೇ
= ಸಂಸಾರವನ್ನು ಅಸಾರವನ್ನಾಗಿಸುವ ಚಟದ ಮೂಲ
= ಸರಾಸರಿಯಾಗಿ ಇದನ್ನು ಸಾರಾಯಿ ಎನ್ನಬಹುದು
= ಮತ್ತೇ ಸಾಕು, ಮತ್ತಿನ್ನೇನು ಬೇಕು ಎನ್ನುವವರ ಸಾಯಂ ತೀರ್ಥ
= ಎಣ್ಣೆ ತಿಕ್ಕುವುದು ಬೇರೆ, ಎಣ್ಣೆ ಹೊಡೆಯುವುದು ಬೇರೆ
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

