ಪೊರಕೆ ಪಕ್ಷ ಮತದಾರರಿಗೆ ಏನನ್ನು ನೀಡುತ್ತದೆ?
ವಿ. ಹೇಮಂತಕುಮಾರ, 9035992900
ಹೆಂಡತಿ ನಮಸ್ಕಾರ ಮಾಡಿದಾಗ ಗಂಡ ಏನೆಂದು ಆಶೀರ್ವಾದ ಮಾಡಬೇಕು?
ದೀರ್ಘ ಸುಮಂಗಲೀ ಭವ ಎಂದರೆ ಜನ ಸ್ವಾರ್ಥಿ ಅಂತಾರೆ!
ಜಗದೀಶ ಎಸ್. ಬೆಳಗಾವಿ, 8722444410
ಸರ್ವಜ್ಞ ಇಚ್ಛೆಯನರಿವ ಸತಿ ಇರಬೇಕು ಅಂತ ಹೇಳಿದ್ದಾನೆ. ಇಚ್ಛೆಯನರಿವ ಪತಿ ಇರಬೇಕು ಅಂತ ಯಾಕೆ ಹೇಳಿಲ್ಲ?
ಆತ ಪುರುಷವಾದಿಯಾಗಿದ್ದುದೇ ಕಾರಣ ಎಂಬುದು ಮಹಿಳಾವಾದಿಗಳ ಆರೋಪ!
ಆರ್.ಸಿ. ಪರಶುರಾಮ್, 9902203492
ಕೇಜ್ರಿವಾಲ್ ಅಧಿಕಾರಕ್ಕೆ ಬಂದ್ರೆ 4 ಡಾಲರ್ಗೆ ಸಿಲೆಂಡರ್ ಕೊಡ್ತಾರಂತೆ. ಹಾಗಾದ್ರೆ ಅವರು ಭಾರತದ ರೂಪಾಯನ್ನು ತೆಗೆದು ಡಾಲರ್ ಮಾಡ್ತಾರಾ?
ಹಾಗೆ ಮಾಡಲು ಬಿಡದಿದ್ದರೆ ಧರಣಿ ಕೂರುತ್ತಾರೆ!
ಕೊ.ಸು. ನರಸಿಂಹ ಮೂರ್ತಿ, ಮೈಸೂರು
ಪೊರಕೆ ಪಕ್ಷ ಮತದಾರರಿಗೆ ಏನನ್ನು ನೀಡುತ್ತದೆ?
ದಿಲ್ಲಿ ಮತದಾರರ ಕೈಗೆ ಕೊಟ್ಟಿದ್ದು ಚೊಂಬು!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಅನ್ನದಾಸೋಹಕ್ಕೂ ಮತ್ತು ಅಕ್ಷರ ದಾಸೋಹಕ್ಕೂ ಭಿನ್ನತೆ ಏನು?
ಒಂದು ಹೊಟ್ಟೆ ಹಸಿವಿಗೆ ಮಾತ್ರ, ಇನ್ನೊಂದು ಜ್ಞಾನದ ಹಸಿವು ಇಂಗಿಸಲು ಸಹಕಾರಿ.
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

