ಮೋದಿ
ಮೋದಿ
= ರಾಷ್ಟ್ರವಾದಿ
= ವಾದ ವಿವಾದಗಳಲ್ಲಿ ಪ್ರತಿವಾದಿಗಳ ಹುಟ್ಟಡಗಿಸುವ 'ವಾದಿ'ರಾಜ
= ದೇಶದ ಹಿತಕ್ಕಾಗಿ ಸಂಸಾರದ ಹಿತಾಹಿತ ಮರೆತ ವಿವಾಹಿತ. ಹಾಗಾಗಿಯೇ ಕೆಲವರಿಗೆ ಅಹಿತ
= ಈತ 'ವಿವಾಹಿತ' ಅಷ್ಟೇ ಅಲ್ಲ, 'ಕೇವಲ ವಿವಾಹಿತ' (ವಾಜಪೇಯಿ ಕೇವಲ ಅವಿವಾಹಿತರಾಗಿದ್ದರು)
= ಪಶ್ಚಿಮದಲ್ಲಿ (ಗುಜರಾತ್) ಉದಯಿಸಿದ ಸೂರ್ಯ
= 'ಮೌತ್ ಕಾ ಸೌದಾಗರ್' ಎಂಬ ಟೀಕೆಯನ್ನು ಮತ್ ಕೀ ಸೌದಾಗರ್ ಎಂದು ಸಾಬೀತುಪಡಿಸಿದಾತ
= ಚಾ ಮಾರುವವನಾದರೂ ಚಾರಿತ್ರ್ಯದ ಮೇಲೆ ಚಾ ಬೀಳಿಸಿಕೊಳ್ಳದವ
= ಶುದ್ಧ ಆ'ಚಾ'ರ ಮತ್ತು ಸ್ಪಷ್ಟ ವಿ'ಚಾ'ರಗಳ ಮೂಲಕ ಚಮಚಾಗಳ ಮೇಲೆ ಚಾಟಿ ಬೀಸಿ 'ಚಾಲೂ ಮಂದಿ' ಎನಿಸಿಕೊಂಡವ
= ಯಾಮಾರಿಸುವವರಿಗಿಂತ ಚಾ ಮಾರುವವನೇ ಉತ್ತಮ ಎಂಬ ಅಭಿಪ್ರಾಯ ಮೂಡಿಸಿದಾತ
= ಕೊಲೆ ಕೊಲೆ ಎಂದು ಸುಳ್ಳುಗಳ ಕೊಲಾಜ್ ಮಾಡಿದವರನ್ನೇ ತನ್ನ ಅಲೆಯಲ್ಲಿ ಮುಳುಗಿಸುತ್ತಿರುವವ
= ಯು.ಪಿ.ಎ ಮತ್ತು ಯು.ಆರ್.ಎ ಇಬ್ಬರಿಗೂ ಈತ (ಕುರ್ಚಿಯ ಮೇಲಿನ) ಕಂಟಕ
= ನಮೋ ಮೇನಿಯಾದ ಮೂಲಕ ವಿರೋಧಿಗಳ ನಮೋನಿಯಾಕ್ಕೆ ಕಾರಣರಾದವರು
= ಹದಿ ಹರೆಯದವರಿಗಷ್ಟೇ ಅಲ್ಲ, ಮುದಿ ಹರೆಯದವರಿಗೂ ಭರವಸೆಯ ಕೌಮುದಿ ಈ ಮೋದಿ
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

