ಸಮಾಜಸೇವೆಗೆ ಬೆಲೆ ತಂದುಕೊಟ್ಟ ಆಲಂ ಪಾಶಾ
ಬೆಂಗಳೂರಿನ ಉದ್ಯಮಿ ಆಲಂ ಪಾಶಾ ಶ್ರೀಮಂತ ಉದ್ಯಮಿಯಾಗಿ, ದಾನಿಯಾಗಿ, ಸಮಾಜಸೇವಕರಾಗಿ...
ಹಿರಿಯರ ಹಾದಿ
ಬೆಂಗಳೂರಿನ ಉದ್ಯಮಿ ಆಲಂ ಪಾಶಾ ಶ್ರೀಮಂತ ಉದ್ಯಮಿಯಾಗಿ, ದಾನಿಯಾಗಿ, ಸಮಾಜಸೇವಕರಾಗಿ ಸಾಕಷ್ಟು ಹೆಸರು ಮಾಡಿದವರು. ಪ್ರಭಾವಿ ರಾಜಕಾರಣಿಗಳ ಭೂಮಾಫಿಯಾವನ್ನು ಪತ್ತೆಹಚ್ಚಿ ಲೋಕಾಯುಕ್ತರ ಗಮನಕ್ಕೆ ತಂದು ನೂರಾರು ಎಕರೆ ಜಮೀನನ್ನು ಸರ್ಕಾರಕ್ಕೆ ಉಳಿಸಿಕೊಟ್ಟು ಬೊಕ್ಕಸಕ್ಕೆ ಆಗುತ್ತಿದ್ದ ನಷ್ಟನವನ್ನು ತಪ್ಪಿಸಿದವರು. ಇಂದಿಗೂ ಲೋಕಾಯುಕ್ತ ನ್ಯಾಯಾಲಯದಲ್ಲಿ ಇವರು ಹೂಡಿರುವ ಮೊಕದ್ದಮೆಗಳು ಅನೇಕ ಪ್ರಭಾವೀ ರಾಜಕೀಯ ಮುಖಂಡರಿಗೆ ಇರುಸು ಮುರುಸಿಗೆ ಕಾರಣವಾಗಿವೆ. ಬೆಂಗಳೂರಿನ ಜಾಹೀರಾತು ಫಲಕಗಳಲ್ಲಿ ಅಶ್ಲೀಲವಾಗಿ ಚಿತ್ರ ಪ್ರದರ್ಶಿಸುವುದನ್ನು ತಪ್ಪಿಸಲು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಉಚ್ಚ ನ್ಯಾಯಾಲಯದಲ್ಲಿ ಹೂಡಿ, ಬೆಂಗಳೂರು ಮಹಾನಗರ ಪಾಲಿಕೆಗೆ ನ್ಯಾಯಾಲಯದಿಂದ ಸೂಚನೆ ಕೊಡಿಸಿ, ಅಂತಹ ಜಾಹಿರಾತುಗಳನ್ನು ತಡೆಗಟ್ಟಿದ ದಾಖಲೆಯೂ ಅವರದ್ದು. ಗುಟ್ಕಾ ಮತ್ತು ತಂಬಾಕು ಸೇವನೆಯ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದ್ದಾರೆ ಪಾಶಾ. ಅಲ್ಲದೆ ಬ್ಯಾಂಕ್ ಒಂದು ತನ್ನ ಸಿಬ್ಬಂದಿಯ ಭವಿಷ್ಯನಿಧಿಯ ದುರ್ಬಳಕೆ ಮಾಡಿಕೊಂಡಿರುವುದು ತಿಳಿದಾಗ ಸಿ.ಬಿ.ಐ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯ ದೊರಕಿಸಿಕೊಟ್ಟು ತಮ್ಮ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳ ಓದಿಗೆ ಅವರ ಜಾತಿ ಧರ್ಮವನ್ನು ಲೆಕ್ಕಿಸದೆ ನೆರವಾಗಿದ್ದಾರೆ. ಬೆಂಗಳೂರಿನ ನಿರ್ಜನ ಪ್ರದೇಶಗಳಲ್ಲಿ ಮತ್ತು ಪಾರ್ಕ್ಗಳಲ್ಲಿ ಯುವಕ ಯುವತಿಯರು ವಿನಾಕಾರಣ ಗಂಟೆಗಟ್ಟಲೆ ಮಾತನಾಡುತ್ತಾ ಕುಳಿತಿದ್ದರೆ, ಅವರ ಪೋಷಕರಿಗೆ ಅಲ್ಲಿಯೇ ಫೋನ್ ಮಾಡಿ ವಿಷಯ ತಿಳಿಸಲು ಪೊಲೀಸರಿಗೆ ಪಾಶಾ ಸಲಹೆ ನೀಡಿದ್ದರಿಂದ ಪೊಲೀಸರು ಅಂತಹ ಜೋಡಿಗಳ ಮೇಲೆ ವಿನಾಕಾರಣ ದೌರ್ಜನ್ಯ ನಡೆಸದೇ, ಅವರ ಪೋಷಕರಿಗೆ ಅಲ್ಲಿಯೇ ಅವರ ಫೋನ್ ಮೂಲಕವೇ ವಿಷಯ ತಿಳಿಸುತ್ತಿದ್ದಾರೆ. ಇಂಥ ವಿಷಯಗಳನ್ನೆಲ್ಲ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದಲೇ ಆಲಂಪಾಶಾ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆದರೂ ಅವ್ಯಾವುದಕ್ಕೂ ಅವರು ತಲೆ ಕೆಡಿಸಿಕೊಳ್ಳದೇ, ಪೋಲೀಸ್ ರಕ್ಷಣೆ ಕೋರಿ ತಮ್ಮ ಸಮಾಜಸೇವಾ ಕಾರ್ಯವನ್ನು ಮುಂದುವರಿಸಿರುವ ಅಲಂಪಾಶಾ ಇತರರಿಗೆ ಮೇಲ್ಪಂಕ್ತಿಯಾಗಿದ್ದಾರೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

