ಮಡಿ
ಮಡಿ
ಮಡಿಯುವ ತನಕ ಕೆಲವರು ಆಚರಿಸುವ ಆಚಾರ
ಶುದ್ಧವಾಗಿರುವುದೆಲ್ಲ ಮಡಿ ಎಂಬುದು ಶುದ್ಧವಾದ ಅರ್ಥ
ಕೊಳಕಾಗಿ ಮಡಿಕೆ ಬಿದ್ದಷ್ಟು ಮಡಿತನ ಜಾಸ್ತಿಯೆಂಬುದು ಕೆಲವು ಕೊಳಕರ ನಂಬಿಕೆ
ದೇವರಿಗೆ ಮಡಿ ಇಷ್ಟವೋ ಅಲ್ಲವೋ ಎಂಬುದು ಬೇರೆ ಪ್ರಶ್ನೆ, ಭಕ್ತರಂತೂ ಕಷ್ಟಪಟ್ಟಾದರೂ ತೊಡುತ್ತಾರೆ
ಮೈಲಿಗೆಯ ಹೊರ ಕವಚ
ದೇವರಿಗೆ ಅಭಿಷೇಕಕ್ಕಾಗಿ ಮಡಿಕೆಯಲ್ಲಿ ನೀರು ತರುವಾಗ ಇದನ್ನುಡುವುದು ರೂಢಿ
ಗುಡಿ ಹೊಕ್ಕುವವರಿಗೆ ಅನ್ವಯಿಸುವ ನಿಬಂಧನೆ
ಮಾಡು ಇಲ್ಲವೇ ಮಡಿ ಉಡು
ಕೆಲವರು ಅನುಯಾಯಿಗಳನ್ನು ಮೋಡಿ ಮಾಡಲು ಬಳಸಿಕೊಳ್ಳುವ ಸಾಧನವೇ ಮಡಿ
ತುಂಬಾ ಮಡಿವಸ್ತ್ರಗಳನ್ನು ಸಂಗ್ರಹಿಸಿ ಇಟ್ಟವನನ್ನು ಮಡಿವಂತ ಎನ್ನಬಹುದು
ಮಡಿ ಮೈಲಿಗೆಯೆಲ್ಲ ಮಡಿಯುವ ದೇಹಕ್ಕೆ, ಮನಸಿಗೆ. ಮಡಿಯದ ನಿತ್ಯ ಆತ್ಮನಿಗೆಲ್ಲಿಯ ಮಡಿ?
ಬೇರೆಯವರನ್ನು ಮುಟ್ಟಿಸಿಕೊಳ್ಳದಿರುವುದು ಮಡಿಯಲ್ಲ. ಕೆಟ್ಟದ್ದನ್ನು ಮುಟ್ಟದಿರುವುದೇ ನಿಜವಾದ ಮಡಿ
ಮಡಿವಂತಿಕೆ ಎಂಬುದು ಶುದ್ಧತೆ ಎಂದಾದರೆ ಆಚಾರದಲ್ಲಷ್ಟೇ ಅಲ್ಲ, ವಿಚಾರದಲ್ಲೂ ಬರಬೇಕು
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

