ಬೋರ್ಡ್ ಬರಹ
ಕೆಲವು ಆಸಕ್ತಿಕರ (ಕಾಲ್ಪನಿಕ) ಫಲಕ ಸಾಹಿತ್ಯ:
ಬೇರೆಡೆ ಹೋಗಿ ಮೋಸ ಹೋಗಬೇಡಿ. ನಮ್ಮಲ್ಲಿಗೆ ಬನ್ನಿ
ನಮ್ಮ ಹೋಟೆಲ್ನಲ್ಲಿ ವೇಟರ್ಗೆ ಟಿಪ್ಸ್ ಕೊಡಬೇಡಿ. ಕೊಡುವುದಿದ್ದರೆ ಕುಕ್ಗೆ (ಟಿಪ್ಸ್ ಸಲಹೆ) ಕೊಡಿ
ರಸ್ತೆ ವಕ್ರವಾಗಿದೆ. ನೇರವಾಗಿ ಚಲಿಸಿ
ಇಲ್ಲಿ ಮೂತ್ರವನ್ನು ವಿಸರ್ಜಿಸುವುದು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ
ಇಲ್ಲಿ ರೋಗಿಗಳಿಗೆ ಮಾತ್ರ ಪ್ರವೇಶ. ರೋಗಗಳಿಗಲ್ಲ
ನೆನಪಿನ ಶಕ್ತಿ ವೃದ್ಧಿಗಾಗಿ ಮರೆಯದೇ ಈ ಔಷಧ ಕುಡಿಯಿರಿ
ತಮ್ಮ ಕಾಲಿನ ಮೇಲೆ ತಾವು ನಿಲ್ಲುವುದನ್ನು ಕಲಿತವರಿಗೆಲ್ಲ ನಮ್ಮ ಪಾದರಕ್ಷೆಯ ಅಂಗಡಿಗೆ ಸ್ವಾಗತ
ಇಲ್ಲಿ ಸಿಗರೇಟ್ ಸೇದುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಹೊಗೆ ಉಗುಳುವುದಕ್ಕೆ ಮಾತ್ರ
ಬಳಸಿದ ಪುಸ್ತಕಗಳನ್ನು ಇಲ್ಲಿ ಅರ್ಧ ರೇಟಿಗೆ ಸ್ವೀಕರಿಸಲಾಗುತ್ತದೆ. ಲಾಸ್ಟ್ ಬೆಂಚ್ ಹುಡುಗರ ಪುಸ್ತಕಕ್ಕೆ ಆದ್ಯತೆ
ಬೇಕಾಗಿದ್ದಾರೆ: ಅವಿವಾಹಿತೆ. ಅಡಿಗೆ ಕೆಲಸಕ್ಕೆ. (ವಿವಾಹಕ್ಕೆ ಒಪ್ಪಿದರೆ) ಊಟ ವಸತಿ ಉಚಿತ
ಇಲಿ ಹಾಲು ದೊರೆಯುತ್ತದೆ (ಮಿಲ್ಕ್ಪಾರ್ಲರ್ನಲ್ಲಿ ಕಂಡದ್ದು)
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

