ಸಂಪಾದಕೀಯ

ಲಿಂಗ

Published On :

ಮೂರು ಲಿಂಗಗಳಿವೆ. ಲಿಂಗವಿಲ್ಲದ ವರ್ಗವನ್ನೂ ಸೇರಿಸಿ.
    ಮೀಸೆ ಗಡ್ಡ ಬರುವವರನ್ನು ಸಾಮಾನ್ಯವಾಗಿ ಪುಲ್ಲಿಂಗ ಎಂದು ಗುರುತಿಸಲಾಗುತ್ತದೆ
    ಗಡ್ಡದ ಬದಲು ಕೂದಲು ಉದ್ದಕ್ಕೆ ಬೆಳೆಸಿದವರನ್ನು ಸ್ತ್ರೀಲಿಂಗವೆನ್ನಲಾಗುತ್ತದೆ
    ಇವೆರಡೂ ಬೆಳೆವವರನ್ನು ತೃತೀಯ ಲಿಂಗವೆನ್ನಲಾಗುತ್ತದೆ
    ಕಾಲ ಬದಲಾಗಿದೆ. ಸ್ತ್ರೀಲಿಂಗ ಕೂದಲು ಬೆಳೆಸುವುದಿಲ್ಲ. ಪುಲ್ಲಿಂಗಕ್ಕೆ ಮೀಸೆಯೇ ಇರುವುದಿಲ್ಲ
    ಲಂಗಧಾರಿಗಳು ಸ್ತ್ರೀಲಿಂಗ, ಲುಂಗಿಧಾರಿಗಳು ಪುಲ್ಲಿಂಗವೆಂದು ಒಂದಾನೊಂದು ಕಾಲದಲ್ಲಿ ಅಂದಾಜಿಸುತ್ತಿದ್ದರಂತೆ
    ಈಗೇನಿದ್ದರೂ ಬಯೋ ಡಾಟಾ ನೋಡಿಯೇ ಯಾವ ಲಿಂಗವೆಂಬ ನಿರ್ಧಾರಕ್ಕೆ ಬರಬೇಕಾಗಿದೆ
    ಲಿಂಗ ಸಮಾನತೆ ಎಂದು ಎದೆಯುಬ್ಬಿಸಿ ಕೂಗಿದರೂ ಉಬ್ಬಿದ ಎದೆಯೇ ತೋರಿಸುತ್ತದೆ ಲಿಂಗದ ಅಸಮಾನತೆಯನ್ನು.
    ಲಿಂಗಭೇದವಿಲ್ಲದೇ ನೆನೆಯಬೇಕಾದ ಲಿಂಗವೆಂದರೆ ಅದು ಶಂಭುಲಿಂಗ
    ಆತ್ಮಲಿಂಗವ ಗಣಪ ಭೂಮಿಯ ಮೇಲಿಟ್ಟ. ಅಲ್ಲಿಗೆ ರಾವಣ ಕೆಟ್ಟ
    ಪುಲ್ಲಿಂಗವಾದರೇನು ಸ್ತ್ರೀಲಿಂಗವಾದರೇನು ಸಲಿಂಗವಲ್ಲದಿದ್ದರಾಯಿತು!
    ಲಿಂಗ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಲಿಂಗ ಭಂಗ ಚಳುವಳಿ ಎನ್ನಬಹುದು
    ಲಿಂಗ ಶಬ್ದ ಯಾವ ಲಿಂಗ
    ಆ ಲಿಂಗ  ಈ ಲಿಂಗ ಆ-ಲಿಂಗ-ನ


-ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.