ಮೀರು
ಮೀರು
ಮೇರೆ ಇರುವುದೇ ಮೀರುವುದಕ್ಕಾಗಿ
ಮಾನವನ್ನು ಮೀರಿದವರು ಮೇರೆಯನ್ನೂ ಮೀರಬಲ್ಲರು
ಮಾರುದ್ದ ಹಾರು
ಜಿಗಿ ಜಿಗಿ ಜಿಗಿತ
ಹನುಮಂತ ಲಂಘನದ ಮೂಲಕ ಮಾಡಿದ ಸೀಮೆಯ ಉಲ್ಲಂಘನೆ
ಗಡಿಯಲ್ಲಿನ ಬೇಲಿಯೊಳಗಿಂದ ಒಳ ನುಗ್ಗುವಿಕೆಯಾ ಮೀರುವಿಕೆಯೇ
ಯಾರಿಗೇನಾದರೂ ನಮ್ಮ ಪ್ರಧಾನಿ ಮಾತ್ರ ಸಹನೆಯ ಮೇರೆ ಮೀರಲಾರರು
ಎಲ್ಲ ಚೌಕಟ್ಟುಗಳನ್ನೂ ಮೀರುವವನೇ ಸಮೀರ
ಕಾನೂನನ್ನು ಸಾಮಾನ್ಯರು ಮೀರಿದರೆ ಶಿಕ್ಷೆ, ದೊಡ್ಡವರು ಮೀರಿದರೆ ಅದು ದೊಡ್ಡತನ
ದೇವರ ಮುಡಿಯೇರುವ ನಾರು ಕೂಡ ಭವವನ್ನು ಮೀರುತ್ತದೆ
ಅತಿಕ್ರಮ-ಣ
ಕಾನೂನನ್ನಾದರೂ ಮೀರಿ ನಿಶ್ಚಿಂತವಾಗಿರಬಹುದು. ಆದರೆ ಹೆಂಡತಿಯ ಮಾತು ಮೀರಿ ಸುಖವಾಗಿರುವವರುಂಟೆ?
ಸೀತೆ ಲಕ್ಷ್ಮಣ ರೇಖೆಯನ್ನು ಮೀರದೇ ಇದ್ದಿದ್ದರೆ ರಾವಣನ ಹನನವಾಗುತ್ತಲೇ ಇರಲಿಲ್ಲ
ಅನಂತ
ಇದೊಂದು ಮುಗಿಯದ ಕತೆ
ಅಂತ್ಯವೇ ಇಲ್ಲದ ಸರಣಿ
ಗಣಿತದ ಅಗಣಿತ ಸಮಸ್ಯೆಗಳು
ಅಪಾರ, ತುಂಬಾ ಎಂಬರ್ಥದಲ್ಲಿ ಬಳಸಲ್ಪಡುವ ಶಬ್ದ
ಕೆಲವರ ಹೆಸರು ಮಾತ್ರ ಅನಂತ, ಬುದ್ಧಿ ತುಂಬಾ ಸೀಮಿತ
ಲಕ್ಷಗಟ್ಟಲೆ ಮೂರ್ತಿಗಳನ್ನು ಇಟ್ಟಿರುವ ಸಾಲಿಗೆ ಅನಂತ ಮೂರ್ತಿಗಳು..! ಎಂದು ಉದ್ಘರಿಸಬಹುದು
ಕೆಲವರ ಸಾಲ ಮತ್ತು ಬಡ್ಡಿಯ ಲೆಕ್ಕಾಚಾರ
ಇನ್ನು ಕೆಲವರ ಹೆಂಡತಿ ಮಕ್ಕಳ ಸಂಖ್ಯೆ
ಹೆಂಡತಿಯ ಮನದಲ್ಲಿ ಮೂಡುವ ಪ್ರಶ್ನೆಗಳೂ ಅನಂತವೇ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

