ಸಂಪಾದಕೀಯ

ಉಡುಗೊರೆ

Published On :

ಸಮಾಧಾನಪಡಿಸಲೆಂದು ನೀಡುವ ಕೊಡುಗೆ
    ವಿವಾಹದಲ್ಲಿ ಇದನ್ನು ನೀಡುತ್ತಾರೆ ಯಾಕೆಂದರೆ, ವಿವಾಹಾನಂತರ ಅದನ್ನು ನೋಡಿಯಾದರೂ ಸ್ವಲ್ಪ ಖುಷಿಪಡಲಿ ಎಂದು
    ಉಡುಗೆ ತೊಡುಗೆಗಳನ್ನೆಲ್ಲಾ ಉಚಿತ ಸಮಯದಲ್ಲಿ ಉಚಿತವಾಗಿ ನೀಡುವಿಕೆಗೆ ಈ ಹೆಸರು
    ಉಡುಗೊರೆ- ಕೊಡುವವಗೆ ಇದು ಒಂದು ಹೊರೆ
    ಉಡುಗೊರೆಯಾಗಿ ಬರುವ ಕೆಲವು ವಸ್ತುಗಳು ಹೇಗಿರುತ್ತವೆಂದರೆ ಬೇರೆಯವರಿಗೆ ಉಡುಗೊರೆಯಾಗಿ ಕೊಡಲು ಮಾತ್ರ ಉಪಯೋಗವಾಗುವಂತಿರುತ್ತವೆ.
    ಉಡುಗೊರೆಗಾಗಿ ಮದುವೆಯಾಗಬಾರದು
    ಕೆಲವರು ಕೊಡುವ ಉಡುಗೊರೆ ಅವರನ್ನು ನೆನಪಿಸುತ್ತವೆ. ಅವರಂತೆಯೇ ಅದೂ ನಿಷ್ಪ್ರಯೋಜನವಾಗಿರುತ್ತವೆ
    ಕೆಲವರು ಮದುವೆಗಳಿಗೆ ಹೆಚ್ಚು ಭೇಟಿ ನೀಡುವುದಿಲ್ಲ. ಕಾರಣ, ಇದೇ ಭಯದಿಂದ
    ನಮ್ಮದೇ ಹಣದಿಂದ ದೊಡ್ಡ ಅಂಗಡಿಗಳು ಕೊಡುವ ಸರಕಿಗೆ ಉಚಿತ ಉಡುಗೊರೆಯೆಂದು ಕರೆಯುತ್ತಾರೆ
    ಉಡುಗೊರೆಯೆಂದರೆ ಮೂಗಿನ ತುದಿಯ ಜೇನುತುಪ್ಪದಂತೆ, ವಾಸನೆ ಬೀರುತ್ತದೆ. ಆಸೆ ಪೂರೈಸುವುದಿಲ್ಲ
    ಕೆಲವರು ನೀಡುವ ಉಡುಗೊರೆಗಿಂತಲೂ ಅದರ ಮೇಲೆ ಬರೆಯಲಾಗುವ ಅವರ ಹೆಸರೇ ದೊಡ್ಡದಿರುತ್ತದೆ
    ತಮ್ಮ ಪರ ಒಲಿಸಿಕೊಳ್ಳಲು ನೀಡುವ ಭಕ್ಷೀಸೂ ಹೌದು
    ಉಡುಗೆಯೊಂದೇ ಅಲ್ಲ, ಏನನ್ನು ಕೊಡುಗೆಯಾಗಿ ಕೊಟ್ಟರೂ ಅದು ಉಡುಗೊರೆಯೇ

ವಿಶ್ವನಾಥ ಸುಂಕಸಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.