ವಿರಾಮ
ವಿರಾಮ
ಎಲ್ಲ ಉದ್ಯೋಗಿಗಳ ಮಹಾ ಬಯಕೆ
ಇಡೀ ವಾರ ಮಾಡುವ ಯುದ್ಧ ಒಂದು ದಿನದ ವಿರಾಮಕ್ಕಾಗಿ
ಕೆಲವರು ಯಾಕೆ ಆಲಸಿಗಳೆಂದರೆ ಕೆಲಸಕ್ಕಿಂತಲೂ ಮೊದಲೇ ವಿರಾಮ ಸ್ವೀಕರಿಸುವುದರಿಂದ
ಇದರಲ್ಲಿ ಅಲ್ಪ ವಿರಾಮ ಮತ್ತು ಪೂರ್ಣ ವಿರಾಮವೆಂದು ಎರಡು ವಿಧ
ಆರಾಮವಾಗಿ ಕಳೆಯಲೆಂದು ಇರುವ ಸಮಯ
ನಿದ್ರೆಯು ಕೆಲಸಕ್ಕೆ ಅಲ್ಪ ವಿರಾಮ. ಕೆಲಸವು ನಿದ್ರೆಗೆ ಪೂರ್ಣ ವಿರಾಮ
ರಾಮ ವನವಾಸದ ಸಮಯದಲ್ಲಿ ಕುಟೀರಗಳಲ್ಲಿ ಪಡೆದಿದ್ದು
ಯೋಧ ಮತ್ತು ಕೃಷಿಕನಿಗೆ ಎಂದೂ ದೊರೆಯದ್ದು
ರಜೆಯೆಂಬ ಮಜಾ ಉಡಾವಣಾ ದಿನ ಮಂಜೂರಿಯಾದ ಮೇಲೆ ವಿರಾಮದಂದೂ ಆರಾಮವಿಲ್ಲ
ಕೆಲವರದು ಅಫೀಸಿನಲ್ಲಿರುವಾಗೆಲ್ಲಾ ವಿರಾಮ. ವೀಕೆಂಡ್ನಲ್ಲಿ ಮಾತ್ರ ಕೈ ತುಂಬಾ ಕೆಲಸ
ಸೂರ್ಯ ಎಂದಿಗೂ ರಜೆ ತೆಗೆದುಕೊಳ್ಳುವುದಿಲ್ಲ. ಆತನಿಗೆ ವರ್ಷಕ್ಕೊಮ್ಮೆ ಒಂದು ವಾರ ಕಡ್ಡಾಯ ರಜೆ ಕೊಟ್ಟು ನೋಡಬೇಕು
ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

