ಸಂಪಾದಕೀಯ

ಬೆಳಕು - ಕತ್ತಲು

Published On :

ಬೆಳಕು - ಕತ್ತಲು
    ಬೆಳಕಿನಲ್ಲಿ ಗೆಲುವು. ಕತ್ತಲೆಯೆಂದರೆ ಗೆಲುವಿಗಾಗಿನ ಅಭ್ಯಾಸ
    ಬೆಳಕೆಂದರೆ ವಿತಾನ. ಅದು ಕತ್ತಲೆಯ ಸಂತಾನ
    ಹಗಲಿನ ಖೂನಿಯೇ ಕತ್ತಲು.
    ಬೆಳಕೆಂದರೆ ಮನಸ್ತಾಪ. ಕತ್ತಲು ಹೊಂದಾಣಿಕೆಯ ಪ್ರಸ್ತಾಪ
    ಬೆಳಕು ನೆಮ್ಮದಿಯ ಅರಸು. ಕತ್ತಲು ಏನನ್ನೂ ಅರಸದ ಅರಸು
    ಬೆಳಕು ದೀಪದ ಗುಲಾಮ. ಕತ್ತಲು ಸ್ವಯಂ ಪ್ರಭಾ
    ಬೆಳಕನ್ನು ಹಚ್ಚಲು ಮತ್ತೇನೋ ಬೇಕು. ಕತ್ತಲನ್ನು ಹಚ್ಚುವ ಅಗತ್ಯವಿಲ್ಲ.
    ಬೆಳಕು ಸ್ವಾತಂತ್ರ್ಯವೆಂಬ ಬಂಧನ, ಕತ್ತಲು ಬಂಧನದಲ್ಲಿನ ಸ್ವಾತಂತ್ರ್ಯ
    ಬೆಳಕೆಂದರೆ ವೃಕ್ಷ. ಕತ್ತಲೆ ಅದರ ವಕ್ಷ (ಎದೆ)
    ಬೆಳಕೆಂದರೆ ಬೆಚ್ಚಗೆ. ಕತ್ತಲು ಹಿತ ಶೀತ
    ಬೆಳಕು ಗಮ್ಯ ಅಥವಾ ಗಣನೀಯ. ಕತ್ತಲು ರಮಣೀಯ.
    ಬೆಳಕು ಬೆಳ್ಳಿ. ಕತ್ತಲು (ಕಾಗೆ) ಬಂಗಾರ
    ಬೆಳಕು ಹಗುರದ ಬೆಳ್ಳಿ ಮೋಡ. ಕತ್ತಲು ಮಳೆ ಸುರಿಸುವ ಕಾರ್ಮೋಡ

ವಿಶ್ವನಾಥ ಸುಂಕಸಾಳ
vishwasunkasal@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.