ಸಂಪಾದಕೀಯ

ಪ್ರಜಾಪ್ರಭುತ್ವ

Published On :

 ಪ್ರಜೆಗಳ ಮೇಲೆ ಸಾಧಿಸಲ್ಪಡುವ ಪ್ರಭುತ್ವ
    (ರಾಜಕಾರಣಿಗಳೆಂಬ) ಪ್ರಜೆಗಳು (ತಮ್ಮ ಸಂಬಂಧಿಕರೆಂಬ) ಪ್ರಜೆಗಳಿಗಾಗಿ (ತಮ್ಮ ಹತ್ತಿರದ) ಪ್ರಜೆಗಳಿಂದಲೇ ನಡೆಸ್ಪಡುವ ಒಂದು (ಸ್ವಾರ್ಥ ಪ್ರಧಾನ) ವ್ಯವಸ್ಥೆ
    ಐದು ವರ್ಷಕ್ಕೊಮ್ಮೆ ಪ್ರಜೆಗಳೇ ಪ್ರಭುಗಳು, ನಂತರ ಪ್ರಭುಗಳ  ಸೇವಕರು
    ಸರ್ವಾಧಿಕಾರವನ್ನು ಕೊನೆಗೊಳಿಸಿ ಸರ್ವರಿಗೂ ಅಧಿಕಾರವನ್ನು ನೀಡುವುದಕ್ಕಾಗಿ ಸರ್ವರ ಅಧಿಕಾರವನ್ನೂ ಕೆಲವರು ಮಾತ್ರ ಅನಭವಿಸುವ ವ್ಯವಸ್ಥೆ
    ಇದನ್ನು ಪ್ರಜಾಸತ್ತೆ ಎಂದೂ ಕರೆಯುತ್ತಾರೆ... ಕಾರಣ ಇಲ್ಲಿ ಪ್ರಜೆಗಳು ಸತ್ತೆ ಎಂದು ಕೂಗಿಕೊಂಡರೂ ಕೇಳುವವರಿಲ್ಲ
    ಪ್ರಜೆಗಳಿಂದ ಆರಿಸಿ ಹೋದವರ ಮಜಾಪ್ರಭುತ್ವ
    ಆಳುವವರ ಅಟ್ಟಹಾಸ, ಅಳುವವರ ಚಟ್ಟಹಾಸ
    ಇಲ್ಲಿ ಬಹುಮತವೇ ಸಮ್ಮತ
    ಲೋಕದ ಕಣ್ಣಿಗೆ ಮಣ್ಣೆರಚುವವರೇ ಹೆಚ್ಚಾಗಿ ಲೋಕಸಭೆಗೆ ಆಯ್ಕೆಯಾಗೋದು ಇಲ್ಲಿನ ಸಹಜ ಪ್ರಕ್ರಿಯೆ
    ನೂರಿಪ್ಪತ್ತು ಕೋಟಿ ಜನ ಅಸಹಾಯಕರಾಗಿ ಕೈ ಕಟ್ಟಿಕೊಂಡು ಐನೂರಿಪ್ಪತ್ತು ಜನರ ಆಟಾಟೋಪ ನೋಡಬೇಕಾದ ಅವಸ್ಥೆ
    ಎಲ್ಲರೂ ಚುನಾವಣೆಗೆ ನಿಲ್ಲಬಹುದು ಗೆಲ್ಲುವುದು ಮಾತ್ರ ಹಣವಂತರೇ


-ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.