ಸಂಪಾದಕೀಯ

ಗಂಡಸರೂ ಬಳೆತೊಟ್ಟರೆ ಆಗುವುದಾದರೂ ಏನು?

Published On :

1 ಓಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಗಂಡಸರೂ ಬಳೆತೊಟ್ಟರೆ ಆಗುವುದಾದರೂ ಏನು?
ಇನ್ನೇನು ಬಳೆ ರೇಟು ಜಾಸ್ತಿಯಾಗುತ್ತೆ.

2 ಆರೀಫ್ (ಅಪ್ಪು), 9964280609
ತುಂಡ್ ಹೈಕ್ಳ ಸಾವಾಸ ಮೂರೊತ್ತು ಉಪವಾಸ.. ಆದ್ರೆ ತುಂಡು ಬಟ್ಟೆ ತೊಟ್ಟ ಹುಡುಗಿ ಸಹವಾಸ?
ಅಲ್ಲೂ ಮೂರೂ ಹೊತ್ತು ಉಪವಾಸ!

3 ವಿ. ಹೇಮಂತಕುಮಾರ, ಬೆಂಗಳೂರು, 9035992900
ತುಟ್ಟಿಭತ್ಯೆಗೂ ತುಟಿಭತ್ಯೆಗೂ ವ್ಯತ್ಯಾಸವೇನು?
ತುಟ್ಟಿಭತ್ತೆ ಸಾರ್ವಜನಿಕ, ತುಟಿಭತ್ತೆ ಖಾಸಗಿ

4 ಫ್ಯಾಷನ್ ಡಿಸೈನರ್ ಮಧು, 9945737427

ಹೃದಯದಿಂದ ಹೃದಯಕ್ಕೆ ಪುಟಿದು, ಪುಟಿದು ಬರುವ ಪ್ರೇಮವನ್ನು ಚೆಂಡಿನ ಆಟಕ್ಕೆ ಹೋಲಿಸಬಹುದಾ?
ನೀನು ಹೃದಯ ಬಿಟ್ಟು ಪುಟಿಯೋದರ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದಂತಿದೆ!

5 ಆರ್. ಮಧುಸೂದನ್, 9945737427
 ಎರಡು ಬೆರಳುಗಳ ಮಧ್ಯೆ ಸಿಕ್ಕಿಹಾಕಿಕೊಳ್ಳುವ ಸಿಗರೇಟಿಗೂ, ಇಬ್ಬರು ಹೆಂಡತಿಯರ ಮಧ್ಯೆ ಸಿಕ್ಕಿಹಾಕಿಕೊಳ್ಳುವ ಗಂಡನಿಗೂ ಏನು ವ್ಯತ್ಯಾಸ?
ಮೊದಲನೆಯದು ಹೊಗೆ, ಎರಡನೆಯದು ಹಗೆ!
 
-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.