ಸಮಸ್ಯೆ
ಸಮಸ್ಯೆ
ಇದೊಂದು ದೊಡ್ಡ ಸಮಸ್ಯೆ ಮಾರಾಯ್ರೆ...
ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆಯೆಂದು ಅರಿಯುವುದೇ ಎಲ್ಲ ಸಮಸ್ಯೆಗಳಿಗೂ ಇರುವ ಪ್ರಾಥಮಿಕ ಪರಿಹಾರ 'ಸಮಸ್ಯಾತ್ಮಾ ವಿನಶ್ಯತಿ'
ಸೊಳ್ಳೆ ಒಂದು ಸಮಸ್ಯೆ. ಬತ್ತಿ ಹಚ್ಚುವುದು ಅದಕ್ಕೆ ಪರಿಹಾರ. ಅದರ ಹೊಗೆಯಿಂದ ಉಸಿರಾಟದ ಸಮಸ್ಯೆಯಾದರೆ ಅದು ನಿಜವಾದ ಸಮಸ್ಯೆ
ಸಮಸ್ಯೆಗಳನ್ನು ಸಮಸ್ಯೆಗಳೆಂದು ಸ್ವೀಕರಿಸುವುದೇ ಎಲ್ಲ ಸಮಸ್ಯೆಗಳ ತಾಯಿ ಬೇರು
ಎಲ್ಲ ಸಮಸ್ಯೆಗಳಿಗೆ ಕಾರಣ ಸಮಸ್ಯೆಗಳಲ್ಲ...
ಸಂಶಯ ಇರುವಲ್ಲಿ ಇದು ಹುಟ್ಟಿಕೊಳ್ಳುತ್ತದೆ
ಎಲ್ಲೋ ಹುಟ್ಟಿ ನಮ್ಮೊಳಗೆ ಬೆಳೆಯುವಂಥದ್ದು
ಹೆಚ್ಚಾದರೆ ಸಮಸ್ಯೆ, ಕಡಿಮೆಯಾದರೂ ಸಮಸ್ಯೆ. ಮಿತಿ ಯಾವುದೆಂದು ಅರಿಯುವುದು ಇನ್ನೂ ಸಮಸ್ಯೆ
ಸಮಸ್ಯೆಗಳನ್ನು ಸಮಸ್ಯೆಗಳೆಂದು ಸ್ವೀಕರಿಸುವುದರಿಂದ ಆಗುವ ಸಮಸ್ಯೆಯೆಂದರೆ, ಕೆರೆದು ಕೆರೆದು ಹುಣ್ಣಾಗಿ ಸೆಪ್ಟಿಕ್ ಆಗುವುದು
ಕೆಲವರು ಸಮಸ್ಯೆಗಳನ್ನು ತಾವಾಗಿಯೇ ಬಿಟ್ಟುಕೊಳ್ಳುತ್ತಾರೆ, ಕೆಲವರು ಕಟ್ಟಿಕೊಳ್ಳುತ್ತಾರೆ, ಕೆಲವರು ಇಟ್ಟುಕೊಳ್ಳುತ್ತಾರೆ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

