ದೀಪ
ದೀಪ
ತನ್ನ ಬುಡಕ್ಕೆ ಕತ್ತಲೆ ಇಟ್ಟು ಬೇರೆಯವರಿಗೆ ಬೆಳಕಾಗುವ ತ್ಯಾಗಿ
ಸಮಾರಂಭದಲ್ಲಿ ಗಣ್ಯರಿಗೆ ಫೋಟೋ ಪೋಸ್ ಕೊಡಲು ಇರುವ ನೆಪ
ದಹಿಸುವ ಅಗ್ನಿ ದೀಪವಾದಾಗ ಬೆಳಗುತ್ತದೆ
ಬೆಂಕಿಪೆಟ್ಟಿಗೆಯ ಬಳಕೆ ಶುರುವಾಗಿದ್ದೇ ಇದಕ್ಕೋಸ್ಕರ
ಇದೂ ಎಣ್ಣೆ ಪಾರ್ಟಿಯೇ
ವಿದ್ಯುದ್ದೀಪವಾದರೆ ಬೆಳಕಿಗಿಂತ ಕತ್ತಲೆಯೇ ಹೆಚ್ಚು
ಬುದ್ಧಿ ದೀಪ, ದೇವರ ದೀಪ ಹಣತೆ ದೀಪ ಕ್ಯಾಂಡಲ್ ದೀಪ ಈ ಗುಂಪಿಗೆ ಸೇರದ ಪದ ವಿದ್ಯುದ್ದೀಪ
ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ ಎಂದು ಪ್ರಾರ್ಥಿಸಿದರೂ ಕೆ.ಇ.ಬಿ.ಯವರಿಗೆ ತಲುಪುವುದೇ ಇಲ್ಲ
ದೀಪವಿದ್ದರೆ ಧೂಪ, ಅನ್ಯಥಾ ದ್ವೀಪ
ದೀಪದಿಂದ ದೀಪವ ಹಚ್ಚುವವನೇ ಮಾನವ. ದೀಪದಿಂದ ಸಿಗರೇಟ್ ಹಚ್ಚುವವ ನಾಗರಿಕ
ಕೊಳಕನ್ನೆಲ್ಲ ತೋರಿಸುವ ಬೆಳಕು
ಪವರ್‌ಕಟ್‌ನಿಂದಾಗಿ ಮನೆಮನೆಯಲ್ಲಿ ಪ್ರತಿನಿತ್ಯವೂ ದೀಪಾವಳಿಯೇ
ದೀಪದ ಬುಡದಲ್ಲಿ ಕತ್ತಲೆ ಎಂಬ ಮಾತಿಗೆ ಅಪವಾದ ಬೀದಿ ದೀಪ
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

