ತೆಂಗಿನಕಾಯಿಯನ್ನು ತೆಂಗಿನಹಣ್ಣು ಅಂತ...
ಮನು ವಿ. ದಾವಣಗೆರೆ, 9739259427
ತೆಂಗಿನಕಾಯಿಯನ್ನು ತೆಂಗಿನಹಣ್ಣು ಅಂತ ಯಾಕೆ ಕರೆಯುವುದಿಲ್ಲ್ಲ?
ಕಿತ್ತಲೆಕಾಯಿ, ಸೇಬುಕಾಯಿ ಎಂದು ಕರೆಯುವುದಿಲ್ಲವಲ್ಲಾ ಅದಿಕ್ಕೆ!
ಲಕ್ಕೂರು ಎಂ. ನಾಗರಾಜ ಮಾಲೂರು, 900538954
ಹಿಂದಿನ ಕಾಲದ ಚಲನಚಿತ್ರಗಳಿಗೂ ಇಂದಿನ ಕಾಲದ ಚಲನಚಿತ್ರಗಳಿಗೂ ಇರುವ ಪ್ರಮುಖ ವ್ಯತ್ಯಾಸವೇನು?
ಅಂದು ಉತ್ತಮ ಚಿತ್ರಕತೆ. ಇಂದು ವಿಚಿತ್ರಕತೆ!
ಉಜ್ಜನಿ ಜಲೇಂದ್ರ, 8971857200
ರೀ ಭಟ್ರೇ ನೀವು 'ಬೈಟುಕಾಫಿ' ಕೊಡೋಕೆ ಶುರುಮಾಡಿದ ಮೇಲೆ ನನ್ನವಳು ಕಾಫಿ ಕೊಡೋದನ್ನೇ ನಿಲ್ಲಿಬಿಟ್ಟಿದ್ದಾಳೆ?
ಪುಣ್ಯವಂತ ನೀನು. ಕೇಳ್ರಪ್ಪೋ ಕೇಳಿ ಹೇಗೂ ಇದೆ ಇನ್ನೊಂದು 'ಕೇಳಿ'ಗೆ ಬ್ರೇಕ್ ಹಾಕಿಲ್ಲವಲ್ಲ!
ರವಿಕುಮಾರ ಜಿ.ಬಿ. 9449669897
ಕನ್ನಡ ಸಿನಿಮಾ ಹತ್ತು ದಿವಸ ಪ್ರದರ್ಶನ ಕಾಣುವುದೇ ಕಷ್ಟ. ಬೇರೆ ಭಾಷೆಯ ಚಿತ್ರಗಳು ಡಬ್ಬಿಂಗ್ ಮಾಡಿ ಕನ್ನಡಕ್ಕೆ ಬಂದರೆ ಕನ್ನಡ ಚಿತ್ರಗಳ ಗತಿ?
'ಡಬ್ಬಿ'ಯಲ್ಲೇ 'ಇಂಗ್'ಹೋಗುತ್ತವೆ!
ಜಗದೀಶ ಎಂ. ಸಂಗಣ್ಣವರ, ಬೆಳಗಾವಿ, 8722444410
ಮದುವೆ ಊಟಕ್ಕೂ, ತಿಥಿ ಊಟಕ್ಕೂ ವ್ಯತ್ಯಾಸವೇನು?
ಮದುವೆ ಊಟಕ್ಕೆ ಮದುಮಕ್ಕಳು ಇರುತ್ತಾರೆ. ತಿಥಿ ಊಟಕ್ಕೆ ತಿಥಿ ಮಾಡಿಸ್ಕೊಳ್ಳೋರು ಇರಲ್ಲ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

