ಸಂಪಾದಕೀಯ

ಹುಡುಗಿಯರಿಗೆ ಏನನ್ನು ಕೊಟ್ಟಾಗ ತುಂಬಾ ಖುಷಿ ಆಗ್ತಾರೆ?

Published On :

ಲಕ್ಕೂರು ಎಂ. ನಾಗರಾಜ ಮಾಲೂರು, 9900538954
ಇಂದಿನ ಕಲಿಯುಗದಲ್ಲಿ ಹುಡುಗಿಯರ ಗುಣ ನೋಡಿ ಪ್ರೀತಿಸಬೇಕಾ, ಹಣ ನೋಡಿ ಪ್ರೀತಿಸಬೇಕಾ ಬಾಣಭಟ್ಟರೇ?
ಹುಡುಗಿಯರಲ್ಲಿ ಏನನ್ನು ನೋಡಬೇಕು ಎಂಬುದು ಗೊತ್ತಿಲ್ಲದಷ್ಟು ಅರಸಿಕರಾಗಬಾರದು.

ಫ್ಯಾಷನ್ ಡಿಸೈನರ್ ಮಧು, 9945737427
ಬಾಡಿದ ಬೆಂಗಾಡಿನಂತಿರುವ ಮನಸ್ಸಿಗೆ ಪ್ರೀತಿಯ ಮಳೆ ಸುರಿಸುವ ಹೃದಯ ಸಿಗುವುದು ತುಂಬಾ ವಿರಳ ಅಲ್ವಾ?
ನಿನ್ನ ನೋಡಿದ್ರೆ ಮುಂಗಾರು ಮಳೆ ಮೂಡಿನಿಂದ ಹೊರಬಂದ ಹಾಗೆ ಕಾಣುತ್ತಿಲ್ಲ!

ಮನು ವಿ. ದಾವಣಗೆರೆ, 9739259427
ಹುಡುಗರು ಹುಡುಗಿಯರಿಗೆ ಏನನ್ನು ಕೊಟ್ಟಾಗ ತುಂಬಾ ಖುಷಿ ಆಗ್ತಾರೆ?
ಎಲ್ಲ ಹುಡುಗರೂ ಮುತ್ತು ಅಂತಲೇ ತಪ್ಪಾಗಿ ಅಂದುಕೊಂಡಿದ್ದಾರೆ.

ವಿ. ಹೇಮಂತಕುಮಾರ, ಬೆಂಗಳೂರು, 9035992900
ಕೆಲವು ಹುಡುಗಿಯರು ಹುಡುಗರನ್ನು ಮೊದಲು ದ್ವೇಷಿಸಿ ನಂತರ ಅವರ ಪ್ರೇಮಪಾಶದಲ್ಲಿ ಸಿಲುಕುತ್ತಾರಲ್ಲ?
ಗಂಡ ಸರಿಯಿಲ್ಲ ಎಂದು ಗೊಣಗುತ್ತಲೇ ಅದೇ ಗಂಡನೊಟ್ಟಿಗೆ ಜೀವನ ಮಾಡುವುದು ಅವರಿಗೆ ಕರಗತ.

ರವಿಕುಮಾರ ಜಿ.ಬಿ. 9449669897
ಮನುಷ್ಯನ ಆಸೆಗಳಿಗೆ ಕೊನೆ ಎಂದು?
ಕೊನೆ ಆಸೆ ಏನಾದ್ರೂ ಇದೆಯಾ ಅಂತ ಬೇರೆಯವರು ಕೇಳಿದ ದಿನ!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.