ದೇವರು
ದೇವರು
ವರ ಕರುಣಿಸುವವನೇ ದೇವರು
ಅಸ್ತಿತ್ವ ಮತ್ತು ಅಭಾವದ ನಡುವೆ ಅವಿತಿರುವವ
ಇದ್ದಾನೆಂದೇ ಭಾವಿಸಿ. ಇದ್ದರಂತೂ ಆಯಿತು, ಇಲ್ಲದಿದ್ದರೆ ನಷ್ಟವಿಲ್ಲ.
ಇದ್ದಾನೆ ಎಂದು ಭಾವಿಸಿದರೆ ಇರುವ. ಇಲ್ಲವೆಂದು ಭಾವಿಸಿದವನಿಗೆ ಇಲ್ಲ
ನಂಬಿ ಕಾಲು ಹಿಡಿದವರ ಕೈ ಹಿಡಿಯುವವ
ದೇವರಿಲ್ಲ ಎಂದರೂ, ಇರುವನು ಎಂದರೂ ಈತನಿಗೇನೂ ನಷ್ಟವಿಲ್ಲ
ದೇವರಿಲ್ಲ ಎನ್ನುವವರ ಎದುರು ಸಾಕ್ಷಾತ್ ದೇವರೇ ಬಂದರೂ ನಂಬಲಾರರು
ನಾವಿದ್ದೇವೆ ಎಂದರೆ ಈತನಿದ್ದಾನೆಂದೇ ಅರ್ಥ
ದೇವರ ಅಸ್ತಿತ್ವದ ಚರ್ಚೆ ಅನಗತ್ಯ. ನಮ್ಮ ಚರ್ಚೆಯಲ್ಲಾಗುವ ನಿರ್ಣಯವನ್ನವಲಂಬಿಸಿ ಆತನ ಅಸ್ತಿತ್ವವಿಲ್ಲ.
ಭೂಮಿ ದುಂಡಗಿದೆ ಎಂದರೂ ನಂಬುತ್ತೇವೆ. ನಾವು ನೋಡಿರದಿದ್ದರೂ... ದೇವರನ್ನು ಮಾತ್ರ ನಂಬಲ್ಲ. ಕಾರಣ ನಾವು ನೋಡಿಲ್ಲ.
ಒಬ್ಬರೇ ದೇವರು ಮನುಷ್ಯನನ್ನು ಸೃಷ್ಟಿಸಿದ. ಆತ ಹಲವು ದೇವರನ್ನು ಸೃಷ್ಟಿಸಿದ
ಇದೊಂದು ಆದರ್ಶ ಕಲ್ಪನೆ; ಮಾನವ ಆಗಬೇಕಾದದ್ದು ಇದೇ...
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

