ಹೆಂಡತಿ
ಹೆಂಡತಿ
ಬಾಸಿಂಗ ಕಟ್ಟಿಸಿಕೊಂಡ ಮೇಲೆ ಬಾಸ್ ಥರ ಆಡುವವಳು
ಕಟ್ಟಿಕೊಂಡವಳು ಮತ್ತು (ತಾಳಿ) ಕಟ್ಟಿಸಿಕೊಂಡವಳು
ಗಂಡನ ಮಾತನಾಡುವ ಶ್ರಮವನ್ನು ಸಂಪೂರ್ಣವಾಗಿ ಕಡಿಮೆಗೊಳಿಸುವವಳು
ಗಂಡ ಬೇರೆಯವರ ಅಧೀನದಲ್ಲಿರುವುದು ಇಷ್ಟವಾಗದ ಕಾರಣ ತನ್ನ ಅಧೀನದಲ್ಲಿಟ್ಟುಕೊಳ್ಳುವವಳು
ಒಬ್ಬಳಾದರೂ ಹೆಂಡತಿ ಇರುವುದು ಯೋಗ್ಯ... ಅಷ್ಟಕ್ಕೂ ಗತಿಯಿಲ್ಲದ ಕಾರಣ
ಮಕ್ಕಳಿಗೆ ತಾಯಿ, ಪತಿಗೆ ಟೀಚರ್
ಗಂಡನ ಪಾಲಿನ ಮಹಾಲಕ್ಷ್ಮೀ; ಇವಳು ಕೊಟ್ಟರೆ ಮಾತ್ರ ಹಣ ಕೆಲವರಿಗೆ
ಡೈವೋರ್ಸ್ ಕೊಡುವುದಿದ್ದರೆ ಅದು ಈಕೆಗೇ
ಹೊಸಿಲು ದಾಟಿದ ಮೇಲೆ ಬಿಸಿಲು ಈಕೆ
ಕೆಲವರಿಗೆ ಓಯಸಿಸ್, ಇನ್ನು ಕೆಲವರಿಗೆ ಓ... ಯೆಸ್... ಯೆಸ್...
ಸಮಾಧಾನಪಡಿಸುವವಳು, ಚಿವುಟಿಯಾದರೂ...
'ಮೌಲ್ಯ'ಮಾಪಕಿ
ಇವಳನ್ನು ಗೆಲ್ಲಲು ಒಂದೇ ಮಾರ್ಗ, ಅದು ಸೋಲುವುದು.
-ವಿಶ್ವನಾಥ ಸುಂಕಸಾಳ
vishwasunkasal@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

