ಸಂಪಾದಕೀಯ

ತವರಿಗೆ ಹೋಗುವಾಗ ಖುಷಿಯಿಂದಿರುವ ಹೆಣ್ಣುಮಕ್ಕಳು ಅದೇ...

Published On :

ರಮೇಶ್ ಭಟ್ ಆವರ್ಸೆ, 9164276058
ತವರಿಗೆ ಹೋಗುವಾಗ ಖುಷಿಯಿಂದಿರುವ ಹೆಣ್ಣುಮಕ್ಕಳು ಅದೇ ಗಂಡನ ಮನೆಗೆ ಹೋಗುವಾಗ ಮುಸಿ ಮುಸಿ ಅಳ್ತಾರಲ್ಲ?
ಗಂಡನ ಮನೆಯವರು ಅಷ್ಟೊಂದು 'ಮಸಿ' ಮೆತ್ಕೊಂಡಿರಬೇಕು!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9635838088
ಕೇಳ್ರಪ್ಪೋ ಕೇಳಿಯಲ್ಲಿ ಕೇಳಬಾರದ ಪ್ರಶ್ನೆ ಯಾವುದು?
ಉತ್ತರಬಾರದ ಪ್ರಶ್ನೆ!

ವಿದ್ಯಾನಾಗ್, ಬೆಂಗಳೂರು
ಗಂಡಸರೇಕೆ ಅಳಬಾರದು ಮತ್ತು ಹೆಂಗಸರೇಕೆ ನಗಬಾರದು?
ಅದು ಗಂಡಸರಿಗೆ ಅಳು ಬಾರದು, ಹೆಂಗಸರಿಗೆ ನಗು ಬಾರದು ಅಂತ ಇರಬೇಕು!

ರ.ವಿ. ಕುಮಾರ್. ಜಿ.ಬಿ, 9449669897
ಡಿಗ್ರಿ ಪಡೆದವರಿಗೆ ಮಾತ್ರ ರಾಜಕೀಯಕ್ಕೆ ಪ್ರವೇಶ ಅಂತ ಕಾನೂನು ತಂದರೆ ಹೇಗಿರುತ್ತೆ?
ಜೈಲಲ್ಲಿ 'ಥರ್ಡ್ ಡಿಗ್ರಿ' ಪಡೆದವರೂ ಬರ್ತಾರಾ?

ಶ್ರೀಮತಿ ಕಲಾಪ್ರಸಾದ್, ಬೆಮೆಲ್‌ನಗರ, ಮೈಸೂರು
ಮನೆಯೊಳಗಿನ ಇಲಿಗಳಿಗಿಂತ, ಮನೆಯ ಹೊರಗಿನ ಹೆಗ್ಗಣಗಳ ಕಾಟ ಇತ್ತೀಚೆಗೆ ಜಾಸ್ತಿಯಾಗ್ತಾ ಇದೆಯಲ್ಲ?
ಮನೆಯೊಳಗಿನ 'ಇಲಿ'ಗಳನ್ನೇ ಹೆಗ್ಗಣಗಳ ರೀತಿ ಬೆಳೆಸಿ ಅವುಗಳ ಮೇಲೆ ಛೂಬಿಡಿ!

- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.