ಸಂಪಾದಕೀಯ

ರಾಹುಲ್ ಗಾಂಧಿ ಕನ್ನಡ ಕಲಿತರೆ ಏನಾಗಬಹುದು?

Published On :


ಕೆ.ಎ. ಲಿಂಗರಾಜು, ನಂಜನಗೂಡು
ರಾಹುಲ್ ಗಾಂಧಿ ಕನ್ನಡ ಕಲಿತರೆ ಏನಾಗಬಹುದು?
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ಮಾಡಿದ್ರೆ ಹೇಗೆ ಎಂದು ಇಬ್ರಾಹಿಂ, ಸಿದ್ರಾಮಯ್ಯಗೆ ಸಲಹೆ ಕೊಡಬಹುದು!

ಉಜ್ಜನಿ ಜಲೇಂದ್ರ, ಮಲ್ಲುಂಗೆರೆ, 8971857200
ಎಣ್ಣೆ ಮಂತ್ರಿ ಡ್ಯಾನ್ಸ್ ಮಾಡೋದನ್ನ ಈಗ ಬಿಟ್ಟಿದ್ದಾರಂತೆ ಹೌದಾ ಭಟ್ರೆ?
ಪ್ರತಿ ಸಲ ಡ್ಯಾನ್ಸ್ ಮಾಡಿದಾಗಲೂ ಅದನ್ನು ಬ್ರೇಕಿಂಗ್ ನ್ಯೂಸ್ ಮಾಡೋದನ್ನಷ್ಟೇ ಬಿಡಲಾಗಿದೆ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ನಿಮ್ಮ ಅತ್ಯಂತ ಪ್ರೀತಿಯ ಕನಸು ಯಾವುದು?
ದಿನಕ್ಕೆ ಹತ್ತು ಗಂಟೆ ಮಲಗುವುದು!

ಬರ್ಕಲಿ ರಮೇಶ್, ಕಿರಗಂದೂರು, ಮಂಡ್ಯ, 9008741348
ಕೆಲವರು ತಮ್ಮ ಹೆಂಡತಿ ಕುರೂಪಿಯೆಂದು ಗೊತ್ತಿದ್ದರೂ ಚೆಲುವೆಯೆಂದು ಓಲೈಸುವುದೇಕೆ?
ಬೇರೆ ಆಯ್ಕೆಗಳಿರುವುದಿಲ್ಲವಲ್ಲ ಬರ್ಕಲಿ!

ವಿ.ಹೇಮಂತಕುಮಾರ್, ಬೆಂಗಳೂರು, 9035992900
ಅವಳು ರಾತ್ರಿ ಮಲಗಿದ್ದಾಗ ತಾನು ತಬ್ಬಿಕೊಳ್ಳುವ ಟೆಡ್ಡಿಬೇರ್‌ಗೆ ನನ್ನ ಹೆಸರನ್ನಿಟ್ಟಿದ್ದಾಳಂತೆ?
ನೀನು ಮಾತ್ರ ತಲೆದಿಂಬಿಗೆ ಆಕೆ ಹೆಸರನ್ನಿಟ್ಟುಕೊಂಡು ಸಮಾಧಾನ ಪಡಬೇಡ!

- ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.