ಮದುವೆ
ಮದುವೆ ಶಬ್ದದ ವಿರುದ್ಧ ಪದ ನೆಮ್ಮದಿ
ವಾಜಪೇಯಿ, ಕಲಾಂ ಮೊದಲಾದವರು ಅವರಂಥಾಗಲು ಇದಾಗದಿರುವುದೇ ಕಾರಣ
ಅವಿವಾಹಿತರು ಹೆಚ್ಚು ಹೊತ್ತು ಆಫೀಸಿನಲ್ಲಿರುತ್ತಾರಂತೆ. ಅದಕ್ಕೆ ಚೆಂದದ ಕಲೀಗ್ಸ್ ಇರುವುದೊಂದೇ ಕಾರಣವಲ್ಲ. ಬೇಗ ಮನೆ ತಲುಪಿ ಮಾಡಬೇಕಾದದ್ದೇನೂ ಇಲ್ಲವಲ್ಲ
ಮದುವೆಯ ಮುಂಚೆ ಚೆನ್ನಾಗಿ ಯೋಚಿಸಿ. ನಂತರ ನಿಮಗೆ ಆ ಅವಕಾಶವಿರುವುದಿಲ್ಲ
ಸಾವಿರ ಸುಳ್ಳು ಹೇಳಿ ಮಾಡಿದ ಮದುವೆ ಲಕ್ಷ ಸುಳ್ಳು ಹೇಳಲೊಂದು ಲೈಸೆನ್ಸ್ ಇದ್ದಂತೆ
ವಿವಾಹಿತರೆಲ್ಲ ಸಂಸಾರಿಗಳೇ. ಆದರೆ ಅವಿವಾಹಿತರೆಲ್ಲ ಬ್ರಹ್ಮಚಾರಿಗಳಲ್ಲ
ಮೊದಲ ತಪ್ಪಿನಿಂದ ಪಾಠ ಕಲಿಯದವರು ಎರಡನೆಯ ಮದುವೆಗೆ ಮನಸ್ಸು ಮಾಡುತ್ತಾರೆ
ಎಲ್ಲ ಬಿಟ್ಟು ಆಶ್ರಯ ಸೇರಿಕೊಳ್ಳುವ ಪೂರ್ವಾಶ್ರಮ-ಗೃಹಾಸ್ಥಾಶ್ರಮ
ಬೇಗ ಮದುವೆಯಾದವನಿಗೆ ಹೆಚ್ಚು ಕಷ್ಟ. ತಡವಾದರೆ ಕಡಿಮೆ ಸುಖ
ಮದುವೆಯ ನಂತರ ಕೇವಲ ಸುಖವನ್ನೇ ಹೊಂದಲು ರಜನಿಕಾಂತ್ ಬಳಿಯೂ ಸಾಧ್ಯವಿಲ್ಲ
ವಿವಾಹಿತರನ್ನು ಭೇಟಿಯಾದಾಗ ಕೇಳಬಹುದಾದ ಮೊದಲ ಪ್ರಶ್ನೆಯೆಂದರೆ ಇದ್ದೀರಾ?
-ವಿಶ್ವನಾಥ ಸುಂಕಸಾಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

