ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಆದರೆ ಈ ಹುಡುಗಿಯರಿಗೆ?
ಆರೀಫ್ (ಅಪ್ಪು), ದಾವಣಗೆರೆ, 9964280609
ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾಯಿತು. ಆದರೆ ಈ ಹುಡುಗಿಯರಿಗೆ?
ಮದುವೆ ಮಂಟಪಕ್ಕೆ ಹಾಕಿದ ಬಾಳೆ ಗಿಡದ ಬುಡದಲ್ಲಿ!
ಪವನಕುಮಾರ ಕೆ.ವಿ. ಬಳ್ಳಾರಿ, 9900515957
ನಾನು ಬಡವ, ನೀನು ಬಡವಿ, ಒಲವೇ ನಮ್ಮ ಬದುಕು ಎಂದವರು ವರಕವಿ ಬೇಂದ್ರೆಯವರು. ಈಗಿನ ಪ್ರೇಮಿಗಳು ಹೇಳುವ ಮಾತೇನು?
ನಾನು ದುಡಿದು, ನೀನು ದುಡಿದು, ಹಣವೇ ನಮ್ಮ ಬದುಕು!
ಕಾಳೀಹುಂಡಿ ಶಿವಕುಮಾರ, ಮೈಸೂರು
ಇಲ್ಲೊಬ್ಬ ಮುದ್ದೆ ತಿಂದರೂ ಸಹಾ ನಿದ್ದೆ ಬರೋದಿಲ್ಲಾ ಅಂತಾನಲ್ಲ ಭಟ್ರೇ?
ಕೋಳಿ ತಿಂದೋರೆಲ್ಲ ಕೋಳಿ ಕೂಗೊ ಹೊತ್ಗೆ ಎದ್ದೇಳಲ್ಲ ಬಿಡು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಮದುವೆ ಆಗದಿದ್ದರೂ ದಾಂಪತ್ಯದಲ್ಲಿ ವಿರಸ ಎಂದು ಜ್ಯೋತಿಷಿ ಹೇಳುತ್ತಾನಲ್ಲಾ?
ಅದು ಅವರ ಸ್ವಂತ ಅನುಭವ ಇರಬೇಕು!
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಗೃಹಿಣಿಯನ್ನು ಹೋಂ ಮಿನಿಸ್ಟರ್ ಎನ್ನಬಹುದಾದರೆ ಗೃಹಸ್ಥನನ್ನು ಎಕ್ಸ್‌ಟರ್ನಲ್ ಮಿನಿಸ್ಟರ್ ಅನ್ಬೋದಾ?
ಹೊರಗಿನ (ಎಕ್ಸ್‌ಟರ್ನಲ್) ಸಂಬಂಧ (ಅಫೇರ್) ಇರಿಸಿಕೊಂಡವರನ್ನು ಖಂಡಿತ ಹಾಗೇ ಕರೆಯಬಹುದು.
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

