ಹುಟ್ಟುಹಬ್ಬ ಆಚರಿಸುವಾಗ ಮೊಂಬತ್ತಿ ಆರಿಸುವುದೇಕೆ?
ಆರೀಫ್ (ಅಪ್ಪು) ದಾವಣಗೆರೆ 9964 280609
ಹೆಚ್ಚು ನಾಚಿಕೆ ಸ್ವಭಾವವುಳ್ಳ ಹುಡುಗಿಯರು ಹೆಚ್ಚಾಗಿ ಮೌನದಿಂದಲೇ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರಲ್ಲಾ ಏಕೆ?
ಮೌನಂ ಸಮ್ಮತಿ ಲಕ್ಷಣಂ!
ಫ್ಯಾಷನ್ ಡಿಸೈನರ್ ಮಧು, 99457 37427
ಜಿರಳೆ, ಕಪ್ಪೆ ತಿನ್ನುವ ಜಪಾನಿಯರಿಗಿರುವ ಬುದ್ಧಿವಂತಿಕೆ ಲಾಡು, ಚಿರೋಟಿ ತಿನ್ನುವ ನಮಗೇಕಿಲ್ಲ?
ಬುದ್ಧಿ ತಲೆಯಲ್ಲಲ್ಲ, ಹೊಟ್ಟೆಯಲ್ಲಿ ಇಲ್ಲವೇ ಕಿಡ್ನಿಯಲ್ಲಿ ಎಂದು ಭಾವಿಸಿರುವವರು ನಾವು.
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ 94491 30531
ಮನೆಮನೆಯಲ್ಲಿ ಮುದ್ದೆ ತಿಂದು, ಮಾರಿಗುಡಿಯಲ್ಲಿ ನಿದ್ದೆ ಮಾಡೋರಿಗೆ ನೀವೇನಂತೀರಿ?
ಏನೇ ಹೇಳಿದರೂ ಕೇಳೋಲ್ಲವಲ್ಲ ನಿದ್ದೆ ಮಾಡ್ತಾ ಇರ್ತಾರೆ!
ಲಕ್ಷ್ಮೀ ಮೋಹನ್‌ದಾಸ್, 'ಇಬ್ಬನಿ' ಕಂಕನಾಡಿ, ಮಂಗಳೂರು
ಕೃಷ್ಣನಿಗೆ ಅವಲಕ್ಕಿ ಕೊಟ್ಟೆ, ಗಣೇಶನಿಗೆ ಕಜ್ಜಾಯ ಕೊಟ್ಟೆ. ಇಬ್ಬರೂ ಒಲಿಯುವ ಸೂಚನೆ ಇಲ್ಲ. ಯಾಕೆ ಭಟ್ರೆ?
ಮೆನು ಚೇಂಜ್ ಮಾಡಿ ನೋಡಿ. ಪಾಪ ಎಷ್ಟು ದಿನಾ ಅಂತ ಅದೇ ಅಲವಕ್ಕಿ, ಕಜ್ಜಾಯ ಇಷ್ಟ ಪಡ್ತಾರೆ?
ಜೆ.ಪಿ. ನಾಗರಾಜ್, ದಾವಣಗೆರೆ, 9901193811
ಹುಟ್ಟುಹಬ್ಬ ಆಚರಿಸುವಾಗ ಮೊಂಬತ್ತಿ ಆರಿಸುವುದೇಕೆ?
ಮುಖದ ಮೇಲಿನ ಸುಕ್ಕು ಕಾಣದಿರಲಿ ಎಂಬ ಎಚ್ಚರಿಕೆ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

