ರುಚಿಯಾದ ಹಣ್ಣು, ಸೊಗಸಾದ ಹೆಣ್ಣು ಇವೆರಡಕ್ಕೂ ಸಾಮ್ಯತೆ ಏನು?
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಈಗ ಬರುತ್ತಿರುವ ಸಿನಿಮಾ ಹಾಡುಗಳಲ್ಲಿ ಬರೀ ಹೆಣ್ಣಿನ ಅವಯವಗಳ ಕುರಿತೇ ಬರೆಯುತ್ತಾರಲ್ಲಾ?
ಹಳೆ ಪಾತ್ರೆ, ಹಳೆ ಕಬ್ಣಾನೇ ಬಿಟ್ಟಿಲ್ಲ ಅವರು. ಹೆಣ್ಣಿನ ಅವಯವಗಳನ್ನು ಬಿಟ್ಟಾರೇ?
ಮಾಗಡಿ ಶ್ರೀನಿವಾಸ್, ರಾಮನಗರ, 9902797767
ರುಚಿಯಾದ ಹಣ್ಣು, ಸೊಗಸಾದ ಹೆಣ್ಣು ಇವೆರಡಕ್ಕೂ ಸಾಮ್ಯತೆ ಏನು?
ಎರಡನ್ನೂ ಕೇವಲ ನೋಡುವುದರಿಂದ ಹಸಿವು ಇಂಗುವುದಿಲ್ಲ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹೃದಯದ ಕೋಟೆಗೆ ಲಗ್ಗೆ ಹಾಕಿದ ಚೆಲುವೆಗೆ ಯಾವ ಶಿಕ್ಷೆ ಕೊಡಲಿ ಭಟ್ರೇ?
ನಿನ್ನ ಮದುವೆಯಾಗುವುದಕ್ಕಿಂತ ಘೋರ ಶಿಕ್ಷೆ ಬೇರೆ ಇದೆಯೇ?
ಆರೀಫ್ (ಅಪ್ಪು), ದಾವಣಗೆರೆ, 9964280609
ಪ್ರೇಮಿಗಳ ದಿನ ಬಂತಂದ್ರೆ ಸಾಕು ಹುಡುಗ ಹುಡುಗಿಯರು ಮರದ ಮರೆಯಲ್ಲಿರಲು ಹೆಚ್ಚು ಇಷ್ಟಪಡುತ್ತಾರಲ್ಲ ಏಕೆ?
ಪರಿಸರ ಪ್ರೇಮ ಅಂದರೆ, ಉತ್ತಮ ಪರಿಸರದಲ್ಲಿ ಪ್ರೇಮಿಸುವುದು ಅಂತ ಅವರು ಭಾವಿಸಿರುವಂತಿದೆ!
ರಮೇಶ ಭಟ್ ಆವರ್ಸೆ, 9164276058
ಬೆನ್ನಿಗೆ ಅಂತ ಒಂದು ಕಣ್ಣು ಇದ್ದಿದ್ದರೆ ಏನಾಗುತ್ತಿತ್ತು?
ಕನ್ನಡಕದಂಗಡಿಗಳ ವ್ಯಾಪಾರ ಏರುತ್ತಿತ್ತು!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

